ಬಿಜೆಪಿ ತ್ಯಜಿಸಿ ಕಾಂಗ್ರೆಸ್ ಸೇರಿದ ಉತ್ತರಾಖಂಡ ಸಚಿವ ಯಶ್ಪಾಲ್ ಆರ್ಯ, ಶಾಸಕ ಸಂಜೀವ್ ಆರ್ಯ
Photo: AICC
ಹೊಸದಿಲ್ಲಿ: ಉತ್ತರಾಖಂಡ ಸರಕಾರದಲ್ಲಿ ಸಾರಿಗೆ ಸಚಿವರಾಗಿದ್ದ ಬಿಜೆಪಿ ನಾಯಕ ಯಶ್ಪಾಲ್ ಆರ್ಯ ಹಾಗೂ ಅವರ ಪುತ್ರ ಸಂಜೀವ್ ಆರ್ಯ ಸೋಮವಾರ ಕಾಂಗ್ರೆಸ್ ಸೇರಿದರು.
ಯಶ್ಪಾಲ್ ಆರ್ಯ ಅವರು ಉತ್ತರಾಖಂಡದ ಬಿಜೆಪಿ ನೇತೃತ್ವದ ಸರಕಾರದಲ್ಲಿ ಸಾರಿಗೆ ಸಚಿವರಾಗಿದ್ದರೆ, ಅವರ ಮಗ ಸಂಜೀವ್ ನೈನಿತಾಲ್ ನಿಂದ ಶಾಸಕರಾಗಿದ್ದಾರೆ.
ಯಶ್ಪಾಲ್ ಆರ್ಯ ಹಾಗೂ ಸಂಜೀವ್ ದಿಲ್ಲಿಯಲ್ಲಿ ಪಕ್ಷದ ನಾಯಕರಾದ ಹರೀಶ್ ರಾವತ್, ರಣದೀಪ್ ಸುರ್ಜೇವಾಲಾ ಹಾಗೂ ಕೆ.ಸಿ. ವೇಣುಗೋಪಾಲ್ ಅವರ ಸಮ್ಮುಖದಲ್ಲಿ ಕಾಂಗ್ರೆಸ್ ಸೇರಿದರು.
"ಭಾರತೀಯ ಜನತಾ ಪಕ್ಷದ (ಬಿಜೆಪಿ) ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ನಂತರ ಯಶ್ಪಾಲ್ ಆರ್ಯ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲಾಯಿತು. ಅವರು ಉತ್ತರಾಖಂಡದ ಕ್ಯಾಬಿನೆಟ್ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ" ಎಂದು ಕಾಂಗ್ರೆಸ್ ನಾಯಕ ರಣದೀಪ್ ಸುರ್ಜೆವಾಲಾ ಅವರ ಹೇಳಿಕೆ ಉಲ್ಲೇಖಿಸಿ ಸುದ್ದಿ ಸಂಸ್ಥೆ ಎಎನ್ಐ ತಿಳಿಸಿದೆ.
Uttarakhand BJP leader Yashpal Arya along with his son MLA Sanjeev joins Congress in presence of party leaders Harish Rawat & KC Venugopal in Delhi
— ANI (@ANI) October 11, 2021
"He (Yashpal) has just tendered resignation from the post of Uttarakhand Cabinet Minister," says Congress leader Randeep Surjewala pic.twitter.com/GRBJsBWSa9