ನಿಟ್ಟೆ- ಕೆಬಿಎಲ್ ವತಿಯಿಂದ ಕೌನ್ ಬನೇಗಾ ಉದ್ಯಮಪತಿ ಸ್ಪರ್ಧೆ
ಮಂಗಳೂರು, ಅ.11: ನಿಟ್ಟೆ ಎಜುಕೇಶನ್ ಟ್ರಸ್ಟ್‌ನ ಅಟಲ್ ಇನ್ಕ್ಯುಬೇಶನ್ ಸೆಂಟರ್ ವತಿಯಿಂದ ಕರ್ನಾಟಕ ಬ್ಯಾಂಕ್ ಸಹಯೋಗದಲ್ಲಿ ದ.ಕ ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಯ ಯುವ ಉದ್ಯಮಿಗಳಿಗೆ ನವೋದ್ಯಮ ವ್ಯವಸ್ಥೆ ಗೆ ಉತ್ತೇಜನ ನೀಡಲು ಕೌನ್ ಬನೇಗಾ ಉದ್ಯಮಪತಿ ಸ್ಪರ್ಧೆ ಆಯೋಜಿಸಲಾಗಿದೆ.
ಪ್ರಾದೇಶಿಕ ಮಟ್ಟದಲ್ಲಿ ಸ್ಟಾರ್ಟ್ ಅಪ್ ಬೆಳವಣಿಗೆಗೆ ವೇದಿಕೆ ಒದಗಿಸಿ ರಾಷ್ಟ್ರೀಯ ಮಟ್ಟದಲ್ಲಿ ಈ ಉದ್ಯಮಶೀಲತೆಯನ್ನು ಬೆಳೆಸುವ ಗುರಿ ಹೊಂದಲಾಗಿದೆ. ಬಯೋಟೆಕ್, ಮೆಡಿಟೆಕ್, ಅಗ್ರಿಟೆಕ್, ಇಂಧನ್ ಮತ್ತು ಸಾಫ್ಟ್‌ವೇರ್ ಆ್ಯಸ್ ಸರ್ವೀಸ್ ಈ ಉದ್ದಿಮೆಗಳ ಕುರಿತಾದ ವಿಚಾರಕ್ಕೆ ಮುಕ್ತವಾಗಿದೆ. ಕರಾವಳಿಯ ಮೂರು ಜಿಲ್ಲೆಗಳಿಗೆ ಸೇರಿದ ಉದ್ಯಮಗಳು, ಸಂಶೋಧನಾ ತಂಡಗಳು ಅಥವಾ ವ್ಯಕ್ತಿಗತ ಉದ್ದಿಮೆದಾರರು (40 ವರ್ಷ ವಯೋಮಿತಿ) ಸ್ಪರ್ಧೆಗಳಲ್ಲಿ ಭಾಗವಹಿಸಬಹುದು ಎಂದು ನಿಟ್ಟೆ ಎಐಸಿ ಮುಖ್ಯ ಮಾರ್ಗದರ್ಶಕ ಸಿಎ ಎಸ್‌ಎಸ್ ನಾಯಕ್ ಸೋಮವಾರ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.
ಸಾರ್ಟ್ ಲಿಸ್ಟ್ ಮಾಡಿದ 25 ಐಡಿಯಾಗಳಿಗೆ ಗ್ರೂಮಿಂಗ್ ಎಕ್ಸ್ ಪರ್ಟ್, ಇಮೇಜ್ ಮತ್ತು ಬ್ರ್ಯಾಂಡಿಂಗ್ ಕನ್ಸಲ್ಟೆಂಟ್ಗಳು ವ್ಯಕ್ತಿತ್ವ ವಿಕಸನ ಮತ್ತು ಪ್ರೊಫೈಲಿಂಗ್ ಕೋಚ್‌ಗಳಿಂದ ಓರಿಯಂಟೇಶನ್ ಮತ್ತು ತರಬೇತಿ ಗೋಷ್ಠಿಗಳನ್ನು ಆಯೋಜಿಸಲಾಗುತ್ತದೆ. ಸ್ಪರ್ಧೆಯ ಗ್ರ್ಯಾಂಡ್ ಫಿನಾಲೆ ಟಿವಿಯಲ್ಲಿ ಐದು ಸಂಚಿಕೆಗಳಲ್ಲಿ ಪ್ರಸಾರವಾಗಲಿದ್ದು, ಪ್ರತಿ ಸಂಚಿಕೆಯಲ್ಲಿ ಒಬ್ಬ ವಿಜೇತರನ್ನು ಘೋಷಿಸಲಾಗುತ್ತದೆ. ವಿಜೇತರು ನಗದು ಬಹುಮಾನದ ಜತೆಗೆ 25 ಲಕ್ಷದ ವರೆಗೆ ಸೀಡ್ ಕ್ಯಾಪಿಟಲ್ ಮತ್ತು ಒಂದು ವರ್ಷದವರೆಗೆ ಉಚಿತ ಇನ್ಕ್ಯುಬೇಷನ್ ಪಡೆಯಲಿದ್ದಾರೆ. ಅ.20 ನೋಂದಣಿಗೆ ಕೊನೇ ದಿನಾಂಕ. ಸ್ಪರ್ಧೆಯ ವಿವರಗಳನ್ನುhttps://aicnitte.com/kbu/ನಿಂದ ಪಡೆಯಬಹುದು. ಹೆಚ್ಚಿನ ಮಾಹಿತಿಗೆ 8660072597 ಸಂಖ್ಯೆಯನ್ನು ಸಂಪರ್ಕಿಸಬಹುದು ಎಂದು ಅವರು ಹೇಳಿದರು.
ನಿಟ್ಟೆ ಎಐಸಿ ಸಿಇಒ ಡಾ. ಅನಂತ ಪದ್ಮನಾಭ ಆಚಾರ್, ಕರ್ನಾಟಕ ಬ್ಯಾಂಕ ಜನರಲ್ ಮ್ಯಾನೇಜರ್ ವಿನಾಯಕ್ ಭಟ್ ಪಿ.ಜೆ. ಉಪಸ್ಥಿತರಿದ್ದರು.







