ಕಲ್ಲಿದ್ದಲು ಕೊರತೆ,ವಿದ್ಯುತ್ ನಿಲುಗಡೆ ಕಳವಳದ ನಡುವೆ ಇಬ್ಬರು ಸಚಿವರನ್ನು ಭೇಟಿ ಮಾಡಿದ ಅಮಿತ್ ಶಾ

ಹೊಸದಿಲ್ಲಿ: ದೇಶದ ಹಲವು ಭಾಗಗಳಲ್ಲಿ ಅಸಮರ್ಪಕ ಕಲ್ಲಿದ್ದಲು ಪೂರೈಕೆಯಿಂದಾಗಿ ವಿದ್ಯುತ್ ಕೊರತೆಯ ಆತಂಕ ಎದುರಾಗಿರುವ ನಡುವೆ ಕಲ್ಲಿದ್ದಲು ಹಾಗೂ ಇಂಧನ ಸಚಿವಾಲಯಗಳ ಉಸ್ತುವಾರಿ ಹೊತ್ತಿರುವ ತನ್ನ ಸಂಪುಟ ಸಹೋದ್ಯೋಗಿಗಳನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಸೋಮವಾರ ಭೇಟಿಯಾದರು.
ಒಂದು ಗಂಟೆ ಅವಧಿಯ ಸಭೆಯಲ್ಲಿ ಮೂವರು ಸಚಿವರು ವಿದ್ಯುತ್ ಸ್ಥಾವರಗಳಿಗೆ ಕಲ್ಲಿದ್ದಲು ಲಭ್ಯತೆ ಹಾಗೂ ಪ್ರಸ್ತುತ ವಿದ್ಯುತ್ ಬೇಡಿಕೆಗಳ ಬಗ್ಗೆ ಚರ್ಚಿಸಿದ್ದಾರೆ ಎಂದು ನಂಬಲಾಗಿದೆ.
ಸಭೆಯಲ್ಲಿ ಹಿರಿಯ ಅಧಿಕಾರಿಗಳು ಹಾಗೂ ಸರಕಾರಿ ಸ್ವಾಮ್ಯದ ಎನ್‌ಟಿಪಿಸಿ ಲಿಮಿಟೆಡ್‌ನ ಅಧಿಕಾರಿಗಳು ಭಾಗವಹಿಸಿದ್ದರು.
ಭಾರತವು ತನ್ನ ವಿದ್ಯುತ್ ಸ್ಥಾವರಗಳ ಬೇಡಿಕೆಯನ್ನು ಪೂರೈಸಲು ಸಾಕಷ್ಟು ಕಲ್ಲಿದ್ದಲು ದಾಸ್ತಾನುಗಳನ್ನು ಹೊಂದಿದೆ ಎಂದು ಕೇಂದ್ರ ಸರಕಾರವು ಭರವಸೆ ನೀಡಿದ್ದರೂ ಸಹ ಹಲವಾರು ರಾಜ್ಯಗಳು ಲೋಡ್ ಶೆಡ್ಡಿಂಗ್ ಬಗ್ಗೆ ಎಚ್ಚರಿಕೆ ನೀಡಿವೆ.
Next Story