ಪರ್ಕಳ: ನಿವೃತ್ತ ಯೋಧರಿಗೆ ಹುಟ್ಟೂರ ಅಭಿನಂದನೆ

ಉಡುಪಿ, ಅ.11: ಶೆಟ್ಟಿಬೆಟ್ಟು ಸರಕಾರಿ ಸಂಯುಕ್ತ ಪ್ರೌಢಶಾಲೆಯ ಹಳೆ ವಿದ್ಯಾರ್ಥಿ ಸಂಘದ ವತಿಯಿಂದ ನಿವೃತ್ತ ಯೋಧರಿಗೆ ಹುಟ್ಟೂರ ಅಭಿನಂದನಾ ಕಾರ್ಯಕ್ರಮವನ್ನು ಪರ್ಕಳದ ವಿಘ್ನೇಶ್ವರ ಸಭಾಭವನದಲ್ಲಿ ರವಿವಾರ ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ನಗರಸಭೆ ಅಧ್ಯಕ್ಷೆ ಸುಮಿತ್ರ ಆರ್.ನಾಯಕ್ ಉದ್ಘಾಟಿಸಿ ದರು. ಅಧ್ಯಕ್ಷತೆಯನ್ನು ನಿವೃತ್ತ ಯೋಧ, ಮಣಿಪಾಲ ಮಾಹೆಯ ಚೀಫ್ ಸೆಕ್ಯೂರಿಟಿ ಆಫೀಸರ್ ರತ್ನಾಕರ್ ಸಾಮಂತ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಮಾತನಾಡಿದರು.
ಈ ಸಂದರ್ಭದಲ್ಲಿ ಜ್ಯೋತಿಷಿ ಕಬ್ಯಾಡಿ ಜಯರಾಮ್ ಆಚಾರ್ಯ, ಸ್ಥಳೀಯ ನಗರಸಭಾ ಸದಸ್ಯೆ ಅಶ್ವಿನಿ ಅರುಣಾ ಪೂಜಾರಿ, ನಗರ ಸಭಾ ವಿರೋಧ ಪಕ್ಷದ ನಾಯಕ ರಮೇಶ್ ಕಾಂಚನ್, ಉದ್ಯಮಿ ಪ್ರಕಾಶ್ ಶೆಣೈ, ಎಸ್.ಪ್ರಸಾದ್ ರೈ, ನಿವೃತ್ತ ಯೋಧರಾದ ಕೃಷ್ಣಪ್ಪಮತ್ತು ಉಮೇಶ್ ಉಪಸ್ಥಿತರಿದ್ದರು. ಅಧ್ಯಕ್ಷರಾದ ಸುಕೇಶ್ ಕುಂದರ್ ಸ್ವಾಗತಿಸಿದರು. ಕಾರ್ಯದರ್ಶಿ ಗಣೇಶ್ ವಂದಿಸಿದರು.
Next Story





