ಮದುವೆ ನಿಶ್ಚಯವಾಗಿದ್ದ ಯುವತಿ ನಾಪತ್ತೆ
ಮಂಗಳೂರು, ಅ.11: ಮದುವೆ ನಿಶ್ಚಯವಾಗಿದ್ದ ಯುವತಿ ನಾಪತ್ತೆಯಾದ ಬಗ್ಗೆ ಕಾವೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಮೂಲತಃ ಕಾರವಾರದ ನಿವಾಸಿಯಾಗಿದ್ದು, ಮಂಗಳೂರಿನ ಗಾರ್ಮೆಂಟ್ಸ್‌ವೊಂದರಲ್ಲಿ ಕೆಲಸಕ್ಕಿದ್ದ ಅಂಜಲಿ ಆನಂದು ಕೊಠರಕರ (24) ನಾಪತ್ತೆಯಾದವರು.
ಈಕೆಗೆ ಮದುವೆ ನಿಶ್ಚಯಾಗಿದ್ದು, ಅದಕ್ಕೆ ಆಕೆ ಒಪ್ಪಿದ್ದಳು. ನಂತರ ಒಂದು ತಿಂಗಳ ಹಿಂದೆ ಕಾರವಾರದ ಮನೆಯಲ್ಲಿ 15 ದಿನಗಳವರೆಗೆ ಇದ್ದು, ಮಂಗಳೂರಿಗೆ ಕೆಲಸಕ್ಕೆಂದು ವಾಪಸಾಗಿದ್ದಳು. ಅ.3ರಂದು ವೇತನ ಪಡೆದುಕೊಂಡು ಮನೆಗೆ ಬರುವುದಾಗಿ ಪೋನ್ ಮೂಲಕ ತಿಳಿಸಿದ್ದಳು. ಆದರೆ ಈವರೆಗೂ ಮನೆಗೆ ಬಂದಿಲ್ಲ. ಆಕೆಯ ಮೊಬೈಲ್ ಸ್ವಿಚ್ ಆಫ್ ಆಗಿದೆ.
ಗಾರ್ಮೆಂಟ್ಸ್‌ನಲ್ಲಿ ವಿಚಾರಿಸಿದಾಗ ಅ.3ರಂದು ಊರಿಗೆ ಹೋಗುವುದಾಗಿ ಹೇಳಿ, ತೆರಳಿರುವುದಾಗಿ ತಿಳಿಸಿದ್ದಾರೆ. ಆಕೆ ಊರಿಗೂ ಬಾರದೆ, ಸಂಬಂಧಿಕರ ಮನೆಗೂ ಹೋಗದೆ ನಾಪತ್ತೆಯಾಗಿದ್ದಾಳೆ ಎಂದು ಅಂಜಲಿ ಅವರ ತಂದೆ ಪೊಲೀಸರಿಗೆ ದೂರು ನೀಡಿದ್ದಾರೆ.
Next Story





