ಐಪಿಎಲ್ ಎಲಿಮಿನೇಟರ್: ಕೆಕೆಆರ್ ಗೆ 139 ರನ್ ಗುರಿ ನೀಡಿದ ಆರ್ ಸಿಬಿ

photo: twitter.com/ESPNcricinfo
ಶಾರ್ಜಾ: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೋಲ್ಕತಾ ನೈಟ್ ರೈಡರ್ಸ್ ಗೆ ಐಪಿಎಲ್ ನ ಎಲಿಮಿನೇಟರ್ ಪಂದ್ಯದ ಗೆಲುವಿಗೆ 139 ರನ್ ಗುರಿ ನೀಡಿದೆ.
ಸೋಮವಾರ ನಡೆದ ಪಂದ್ಯದಲ್ಲಿ ಟಾಸ್ ಜಯಿಸಿ ಮೊದಲು ಬ್ಯಾಟಿಂಗ್ ಆಯ್ದುಕೊಂಡ ಆರ್ ಸಿಬಿ ತಂಡ ಕೆಕೆಆರ್ ಸ್ಪಿನ್ನರ್ ಸುನೀಲ್ ನರೇನ್ (4-21)ದಾಳಿಗೆ ನಲುಗಿ ನಿಗದಿತ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 138 ರನ್ ಗಳಿಸಲಷ್ಟೇ ಶಕ್ತವಾಯಿತು.
ಇನಿಂಗ್ಸ್ ಆರಂಭಿಸಿದ ದೇವದತ್ತ ಪಡಿಕ್ಕಲ್(21, 18 ಎಸೆತ) ಹಾಗೂ ನಾಯಕ ವಿರಾಟ್ ಕೊಹ್ಲಿ (39 ರನ್, 33 ಎಸೆತ, 5 ಬೌಂ.)5.1 ಓವರ್ ಗಳಲ್ಲಿ 49 ರನ್ ಗಳಿಸಿ ಉತ್ತಮ ಆರಂಭವನ್ನೇ ನೀಡಿದ್ದರು. ಆದರೆ ಈ ಜೋಡಿ ಬೇರ್ಪಟ್ಟ ಬಳಿಕ ಗಮನಾರ್ಹ ಜೊತೆಯಾಟವೇ ನಡೆಯಲಿಲ್ಲ.
ಗ್ಲೆನ್ ಮ್ಯಾಕ್ಸ್ ವೆಲ್ 15, ಅಹ್ಮದ್ 13, ಎಬಿಡಿ ವಿಲಿಯರ್ಸ್ 11 ರನ್ ಗಳಿಸಿದರು. ಕೆಕೆಆರ್ ಪರ ವಿಂಡೀಸ್ ಸ್ಪಿನ್ನರ್ ನರೇನ್ ಯಶಸ್ವಿ ಬೌಲರ್ ಎನಿಸಿಕೊಂಡರೆ, ಲಾಕಿ ಫರ್ಗ್ಯುಸನ್(2-30) ಎರಡು ವಿಕೆಟ್ ಉರುಳಿಸಿದರು. ಡ್ಯಾನ್ ಕ್ರಿಸ್ಟಿಯನ್(9) ರನೌಟಾದರು.
Next Story