ಮೈಸೂರು ಬಾಂಬ್ ಸ್ಫೋಟ ಪ್ರಕರಣ; ಇಬ್ಬರಿಗೆ 10 ವರ್ಷ, ಒಬ್ಬರಿಗೆ 5 ವರ್ಷ ಜೈಲು ಶಿಕ್ಷೆ ಪ್ರಕಟ

ಬೆಂಗಳೂರು, ಅ.10: 2016ರ ಮೈಸೂರು ಬಾಂಬ್ ಸ್ಫೋಟ ಪ್ರಕರಣದಲ್ಲಿ ಇಬ್ಬರು ಆರೋಪಿಗಳಿಗೆ 10 ವರ್ಷ ಜೈಲು ಶಿಕ್ಷೆ ಹಾಗೂ ಒಬ್ಬ ಆರೋಪಿಗೆ 5 ವರ್ಷ ಜೈಲು ಶಿಕ್ಷೆ ಪ್ರಕಟಿಸಿ ಬೆಂಗಳೂರಿನ ಎನ್‍ಐಎ ವಿಶೇಷ ಕೋರ್ಟ್ ಆದೇಶ ಹೊರಡಿಸಿದೆ.
ತಮಿಳುನಾಡು ಮೂಲದ ನೈನಾರ್ ಅಬ್ಬಾಸ್ ಅಲಿ, ಎಂ.ಸಮಸೂನ್ ಕರೀಂ ರಾಜ್ ಹಾಗೂ ದಾವೂದ್ ಸುಲೆಮಾನ್‍ಗೆ ಶಿಕ್ಷೆ ನೀಡಲಾಗಿದೆ ಎಂದು ನ್ಯಾ.ಕಸನಪ್ಪ ನಾಯ್ಕ್ ತೀರ್ಪು ಪ್ರಕಟಿಸಿದ್ದಾರೆ.
ಏನಿದು ಪ್ರಕರಣ: 2016ರ ಆ.1ರಂದು ಮೈಸೂರು ಜಿಲ್ಲಾ ನ್ಯಾಯಾಲಯದ ಶೌಚಾಲಯದಲ್ಲಿ ಅಡುಗೆ ಕುಕ್ಕರಿನಲ್ಲಿ ಬಾಂಬ್ ಇಟ್ಟು ಆರೋಪಿಗಳು ಸ್ಫೋಟಿಸಿದ್ದರು. ಸೆ.20ರಂದು ಪ್ರಕರಣದ ತನಿಖೆ ಕೈಗೆತ್ತಿಕೊಂಡಿದ್ದ ಎನ್‍ಐಎ, ಮೂವರ ವಿರುದ್ಧ ಕೋರ್ಟ್‍ಗೆ ದೋಷಾರೋಪ ಪಟ್ಟಿ ಸಲ್ಲಿಸಿತ್ತು.
ಬ್ಯಾಟರಿ, ಗ್ಲಾಸ್ ಪೀಸ್, ಪಟಾಕಿ ಪೌಡರ್, ಕೆಮಿಕಲ್ ಬಳಸಿ ಬಾಂಬ್ ತಯಾರಿಸಿದ್ದರು. ಆಯೂಬ್‍ಗೆ ಗೊತ್ತಿಲ್ಲದೆ ಅವನ ಮನೆಯಲ್ಲಿ ಬಾಂಬ್ ತಯಾರು ಮಾಡಿದ್ದ ಹಿನ್ನೆಲೆ ಹೈಕೋರ್ಟ್ ವಾದ ಆಲಿಸಿ ಕ್ಷಮಾದಾನ ನೀಡಿತ್ತು.
Next Story





