ಚಾಮರಾಜನಗರ: ವಿವಿಧ ಬೇಡಿಕೆಗೆ ಆಗ್ರಹಿಸಿ ಗ್ರಾಮ ಪಂಚಾಯತ್ ಕಚೇರಿ ಎದುರು ವಿಕಲಚೇತನರ ಪ್ರತಿಭಟನೆ
ಚಾಮರಾಜನಗರ: ಗ್ರಾಮ ಪಂಚಾಯತ್ ನಿಂದ ಅಂಗವಿಕಲರಿಗೆ ಸರ್ಕಾರದ ಯಾವ ಯೋಜನೆಗಳು ದೊರೆತಿಲ್ಲ ಎಂದು ಆರೋಪಿಸಿ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಕೂತನೂರು ಗ್ರಾಮಪಂಚಾಯತಿ ಎದುರು ವಿಕಲಚೇತನರು ಪ್ರತಿಭಟನೆ ನಡೆಸಿದ್ದಾರೆ.
ಸಾಮಾನ್ಯರಾಗಿದ್ದರು ಬದುಕು ರೂಪಿಸಿಕೊಳ್ಳಲು ವಿಕಲಚೇತನರು ಹೆಣಗಾಡುವ ದುಃಸ್ಥಿತಿಯಲ್ಲಿದ್ದಾರೆ, ಜೀವನ ನಿರ್ವಹಣೆಗೆ ಮತ್ತು ಅಂಗವಿಕಲರ ಸಭಲೀಕರಣಕ್ಕೆ ಸರ್ಕಾರ ಎಲ್ಲಾ ವ್ಯವಸ್ಥೆಗಳನ್ನು ಮಾಡಿದ್ದರೂ ಸಹ ಫಲಾನುಭವಿಗಳ ಕೈ ಸೇರುತ್ತಿಲ್ಲ ಎಂಬ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಕೂತನೂರು ಗ್ರಾಮದಲ್ಲಿ ಅಂಗವಿಕಲರು ಪ್ರತಿಭಟನೆ ನಡೆಸಿ ಪಂಚಾಯತಿ ಆಡಳಿತದ ವಿರುದ್ಧ ದಿಕ್ಕಾರದ ಘೋಷಣೆಗಳನ್ನ ಕೂಗುವ ಮೂಲಕ ನಮಗೆ ಸಿಗುವ ಸೌಲಭ್ಯಗಳನ್ನು ನೀಡುವಂತೆ ಒತ್ತಾಯಿಸಿದ್ದಾರೆ.
ಕಳೆದ ಐದಾರು ವರ್ಷಗಳಿಂದಲೂ ಅಂಗವಿಕಲರಿಗೆ ಸರ್ಕಾರದಿಂದ ಬಂದಂತ ಯೋಜನೆಗಳು ತಲುಪಿಲ್ಲ ವಿಕಲಚೇತನರು ವಿವಾಹವಾಗುವ ಸಂಧರ್ಭದಲ್ಲಿ ಬರುವ ಸಹಾಯಧನವನ್ನು ವಿತರಿಸಿಲ್ಲ , ಗ್ರಾಮಪಂಚಾಯತಿಯಲ್ಲಿ ವಿಕಲಚೇತನರಿಗೆ ಮೀಸಲಿರುವ ಶೇ.5 ರಷ್ಟು ಅನುದಾನ ಸಮರ್ಪಕವಾಗಿ ಬಳಕೆಯಾಗಿಲ್ಲ, ದುಡಿಯಲು ಆಗದ ನಾವು ಸಂಕಷ್ಟದಲ್ಲಿ ಬದುಕಬೇಕಾದ ಸ್ಥಿತಿ ಬಂದೊದಗಿದೆ. ಈ ಕುರಿತು ಗ್ರಾಮಪಂಚಾಯತ್ ಅಧಿಕಾರಿಗಳನ್ನ ಕೇಳಿದರೆ ಇಂದು ನಾಳೆ ಎಂದು ಸಬೂಬು ಹೇಳುತ್ತಾರೆ .
ಮಹದೇವ್. ವಿಕಲಚೇತನ.
ಗ್ರಾಮಪಂಚಾಯತಿಯ ಅಧ್ಯಕ್ಷೆ ಲಕ್ಷ್ಮಮ್ಮ ಬದಲಿಗೆ ಅವರ ಪತಿ ಕಚೇರಿಗೆ ಆಗಮಿಸುತ್ತಾರೆ ಪ್ರಸ್ತುತವಾಗಿ ಕೂತನೂರು ಗ್ರಾಮಪಂಚಾಯತಿ ಅಧ್ಯಕ್ಷೆ ಚುನಾವಣೆಯಲ್ಲಿ ಆಯ್ಕೆಯಾದ ಬಳಿಕ ಒಮ್ಮೆಯೂ ಸಹ ಪಂಚಾಯತಿಗೆ ಭೇಟಿ ನೀಡಿಲ್ಲ ಗ್ರಾಮಪಂಚಾಯತಿ ಸಭೆಗಳಿಗೆ ಅವರ ಪತಿ ಆಗಮಿಸಿ ಅಧ್ಯಕ್ಷರ ಸಹಿಯನ್ನು ಕೂಡ ಮಾಡಲಾಗುತ್ತೆ ಎಲ್ಲಾ ವಿಚಾರಗಳಿಗೂ ಅದ್ಯಕ್ಷೆ ಲಕ್ಷ್ಮಮ್ಮ ಅವರ ಪತಿ ಜವಾಬು ಕೊಡ್ತಾರೆ ಎಂದು ಸ್ಥಳೀಯ ಗಣೇಶ್ ಆರೋಪ ಮಾಡಿದ್ದಾರೆ.
ಪ್ರತಿಭಟನೆ ವಿಚಾರ ತಿಳಿಯುತ್ತಿದ್ದಂತೆ ಕಚೇರಿಗೆ ಆಗಮಿಸಿದ ಪಿಡಿಒ ಮೋಹನ್ ಕುಮಾರ್ ವಿಕಲಚೇತನರನ್ನು ಮನವೊಲಿಸಲು ಪ್ರಯತ್ನಿಸಿದರೂ ಸಹ ನಮ್ಮ ಸೌಲಭ್ಯಗಳು ದೊರೆಯಲೇಬೇಕು ಕಳೆದ ಐದಾರು ವರ್ಷದಿಂದ ಪಂಚಾಯತಿ ಆಡಳಿತದಿಂದ ಬೇಸತ್ತು ಹೋಗಿದ್ದೇವೆ ಎಂದು ಪ್ರತಿಭಟನಾಕಾರರು ಕಿಡಿಕಾರಿದರು.







