ಕ್ಯಾಲಿಫೋರ್ನಿಯಾದ ವಸತಿಪ್ರದೇಶದಲ್ಲಿ ಸಣ್ಣ ವಿಮಾನ ಪತನ: ಇಬ್ಬರು ಮೃತ್ಯು

ಲಾಸ್ ಏಂಜಲೀಸ್: ಕ್ಯಾಲಿಫೋರ್ನಿಯಾ ನಗರದ ವಸತಿ ಪ್ರದೇಶದಲ್ಲಿ ಸೋಮವಾರ ಸಣ್ಣ ವಿಮಾನ ವೊಂದು ಪತನಗೊಂಡ ಪರಿಣಾಮವಾಗಿ ಎರಡು ಮನೆಗಳು ಹಾಗೂ ಹಲವಾರು ವಾಹನಗಳು ಬೆಂಕಿಗಾಹುತಿಯಾಗಿ ಕನಿಷ್ಠ ಇಬ್ಬರು ಮೃತಪಟ್ಟಿದ್ದಾರೆ.
ಸೆಸ್ನಾ 340 ಕಂಪೆನಿಗೆ ಸೇರಿರುವ ವಿಮಾನವು ಎರಡು-ಎಂಜಿನ್ ಹಾಗೂ ಆರು ಆಸನಗಳನ್ನು ಹೊಂದಿತ್ತು ಎಂದು ಫಾಕ್ಸ್ 5 ಸ್ಯಾನ್ ಡಿಯಾಗೋ ವರದಿ ಮಾಡಿದೆ. ವಿಮಾನವು ಅರಿಝೋನಾದ ಯುಮಾದಿಂದ ಹೊರಟಿತ್ತು.
ಘಟನೆಯಲ್ಲಿ ಕನಿಷ್ಠ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ಅಗ್ನಿಶಾಮಕ ಅಧಿಕಾರಿ ಜಸ್ಟಿನ್ ಮತ್ಸುಶಿತಾ ತಿಳಿಸಿದ್ದಾರೆ.
Plane crash in #Santee, #California.pic.twitter.com/btP9TgyFVP
— G219_Lost (@in20im) October 11, 2021
Next Story