ಅರವಿಂದ ಕೇಜ್ರಿವಾಲ್ ನಿವಾಸದ ಹೊರಗೆ ನಡೆದ ಪ್ರತಿಭಟನೆಯಲ್ಲಿ ಬಿಜೆಪಿ ಸಂಸದ ಮನೋಜ್ ತಿವಾರಿಗೆ ಗಾಯ

ಹೊಸದಿಲ್ಲಿ: ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ನಿವಾಸದ ಎದುರು ಇಂದು ಮಧ್ಯಾಹ್ನ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಬಿಜೆಪಿ ಸಂಸದ ಮನೋಜ್ ತಿವಾರಿ ಗಾಯಗೊಂಡಿದ್ದಾರೆ. ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು ಎಂದು NDTV ವರದಿ ಮಾಡಿದೆ.
50 ವರ್ಷ ವಯಸ್ಸಿನ ಬಿಜೆಪಿ ನಾಯಕನಿಗೆ ಸಹಾಯ ಮಾಡಲು ಬೆಂಬಲಿಗರು ಸುತ್ತು ವರಿದಿರುವ ದೃಶ್ಯ ಕಂಡುಬಂದಿದೆ. ತಿವಾರಿ ಅವರನ್ನು ಸಫ್ದರ್‌ಜಂಗ್ ಆಸ್ಪತ್ರೆಗೆ ಕರೆದೊಯ್ಯಲಾಯಿತು.
ನಗರದಲ್ಲಿ ಛತ್ತ್ ಕಾರ್ಯಕ್ರಮಗಳನ್ನು ನಿಷೇಧಿಸಿರುವ ದಿಲ್ಲಿ ಸರಕಾರದ ವಿರುದ್ಧ ತಿವಾರಿ ಪ್ರತಿಭಟಿಸುತ್ತಿದ್ದರು.
ಪ್ರತಿಭಟನೆಗಿಂತ ಮೊದಲು ಅವರ ಕಚೇರಿಯು ವೀಡಿಯೊವನ್ನು ಪೋಸ್ಟ್ ಮಾಡಿತ್ತು. ಅಲ್ಲಿ ಅವರು ಪ್ರತಿಭಟನೆಯಲ್ಲಿ ಸೇರುವಂತೆ ಜನರಿಗೆ ಮನವಿ ಮಾಡಿದ್ದರು.
Next Story