ಡಾ. ಉಮರ್ ಖಾಲಿದ್ ಯುವಜನತೆಗೆ ಸ್ಪೂರ್ತಿದಾಯಕ ಭಾರತೀಯ: ಕುನಾಲ್ ಕಾಮ್ರಾ

Photo: Kunal Kamra(Facebook)
ಮುಂಬೈ, ಅ.12 : ದಿಲ್ಲಿ ಗಲಭೆ ಪ್ರಕರಣದಲ್ಲಿ ಬಂಧಿತರಾಗಿ ಜೈಲಿನಲ್ಲಿರುವ ಜೆ ಎನ್ ಯು ಮಾಜಿ ವಿದ್ಯಾರ್ಥಿ ನಾಯಕ ಡಾ. ಉಮರ್ ಖಾಲಿದ್ ಈ ಪೀಳಿಗೆಯ ಯುವಜನರಿಗೆ ಅತ್ಯಂತ ಸ್ಫೂರ್ತಿಯುತ ಭಾರತೀಯ ಎಂದು ಖ್ಯಾತ ಹಾಸ್ಯ ಕಲಾವಿದ ಕುನಾಲ್ ಕಾಮ್ರಾ ಹೇಳಿದ್ದಾರೆ.
ಲ್ಯಾಪ್ ಟಾಪ್ ನಲ್ಲಿ ಉಮರ್ ಖಾಲಿದ್ ಮಾತನಾಡುವ ಫೋಟೋ ಒಂದನ್ನು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಕುನಾಲ್ ಕಾಮ್ರಾ "13 ತಿಂಗಳುಗಳಿಂದ ಜೈಲಿನಲ್ಲಿದ್ದರೂ ಇನ್ನೂ ಮುಗುಳ್ನಗುತ್ತಾ, ಇನ್ನೂ ಪ್ರೀತಿ ವ್ಯಕ್ತಪಡಿಸುತ್ತಾ , ಇನ್ನೂ ಧನಾತ್ಮಕ ಚಿಂತನೆ ಪ್ರಕಟಿಸುತ್ತಾ, ಇನ್ನೂ ಓದುತ್ತಿರುವ, ಇನ್ನೂ ಬರೆಯುತ್ತಿರುವ, ಸಿಟ್ಟು ಸೆಡವು ತೋರಿಸದೆ ಆತಂಕಕ್ಕೆ ಒಳಗಾಗದೆ ಸ್ಥೈರ್ಯ ಕಳಕೊಳ್ಳದೆ ಇರುವ ಡಾ. ಉಮರ್ ಖಾಲಿದ್ ಈ ಪೀಳಿಗೆಯ ಜನರಿಗೆ ಅತ್ಯಂತ ಪ್ರೇರಣಾದಾಯಕ ಭಾರತೀಯರಲ್ಲಿ ಒಬ್ಬರಾಗಿದ್ದಾರೆ" ಎಂದು ಕುನಾಲ್ ಬರೆದಿದ್ದಾರೆ.
Next Story