ಮುಂದಿನ ವಾರದಿಂದ ಸಾಮರ್ಥ್ಯದ ನಿರ್ಬಂಧಗಳಿಲ್ಲದೆ ದೇಶೀಯ ವಿಮಾನಗಳ ನಿರ್ವಹಣೆಗೆ ಕೇಂದ್ರ ಅನುಮತಿ

ಹೊಸದಿಲ್ಲಿ: ದೇಶೀಯ ವಿಮಾನಯಾನ ಸಂಸ್ಥೆಗಳು ಇದೀಗ ಸಾಮರ್ಥ್ಯದ ನಿರ್ಬಂಧಗಳಿಲ್ಲದೆ ಪ್ರಯಾಣಿಕರ ವಿಮಾನಗಳನ್ನು ನಿರ್ವಹಿಸಬಹುದು ಎಂದು ನಾಗರಿಕ ವಿಮಾನಯಾನ ಸಚಿವಾಲಯ ಮಂಗಳವಾರ ಹೇಳಿದೆ. ಹೊಸ ಆದೇಶವು ಅಕ್ಟೋಬರ್ 18, ಸೋಮವಾರದಿಂದ ಜಾರಿಗೆ ಬರುತ್ತದೆ.
ಆದಾಗ್ಯೂ, ವಿಮಾನಯಾನ ಸಂಸ್ಥೆಗಳು ಹಾಗೂ ವಿಮಾನ ನಿಲ್ದಾಣ ನಿರ್ವಾಹಕರು, "ಕೋವಿಡ್ -19 ರ ಹರಡುವಿಕೆಯನ್ನು ನಿಯಂತ್ರಿಸಲು ಮಾರ್ಗಸೂಚಿಗಳನ್ನು ಹಾಗೂ ಕೋವಿಡ್-ಸೂಕ್ತ ನಡವಳಿಕೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗಿದೆಯೆ ಎಂದು ಖಚಿತಪಡಿಸಿಕೊಳ್ಳಬೇಕು" ಎಂದು ಸಚಿವಾಲಯ ಹೇಳಿದೆ.
ವಿಮಾನ ಪ್ರಯಾಣದ ಬೇಡಿಕೆಯನ್ನು ಪರಿಶೀಲಿಸಿದ ನಂತರ ಸಾಮರ್ಥ್ಯದ ನಿರ್ಬಂಧಗಳನ್ನು ತೆಗೆದುಹಾಕಲಾಗಿದೆ ಎಂದು ಸಚಿವಾಲಯ ಹೇಳಿದೆ.
Next Story