ಅಸ್ಪೃಶ್ಯತೆ ನಿವಾರಣೆ ಕುರಿತ ನಾಟಕ ರಚನೆಗೆ ತರಬೇತಿ
ಉಡುಪಿ, ಅ.12: ಜಿಲ್ಲೆಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಪ.ಜಾತಿ ಮತ್ತು ಪ.ಪಂಗಡದ ದೌರ್ಜನ್ಯ ಅಧಿನಿಯಮ ದಲ್ಲಿರುವ ಅಸ್ಪಶ್ಯತೆ ನಿವಾರಣೆಯನ್ನು ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಬೀದಿ ನಾಟಕದ ಮೂಲಕ ತಿಳಿಯಪಡಿಸಿ ಅಸ್ಪಶ್ಯತೆ ಹೋಗಲಾಡಿಸುವ ಬಗ್ಗೆ ಕಾರ್ಯಕ್ರಮ ಅನುಷ್ಠಾನಗೊಳಿಸಲಾಗುತ್ತಿದ್ದು, ಇದಕ್ಕಾಗಿ ಅಸ್ಪಶ್ಯತಾ ನಿವಾರಣೆಯ ಅರಿವು ಮೂಡಿಸುವ ನಾಟಕ ರಚನಾ ತರಬೇತಿಗೆ ಅರ್ಹ ಲೇಖಕರನ್ನು ಆಯ್ಕೆ ಮಾಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಆಸಕ್ತ ಲೇಖಕರು ಅರ್ಜಿಯನ್ನು ಅ.22ರೊಳಗೆ ಸಹಾಯಕ ನಿರ್ದೇಶಕರ ಕಚೇರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಗತಿನಗರ ಮಣಿಪಾಲ ಉಡುಪಿ ಇಲ್ಲಿಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಳಿಗೆ ದೂ.ಸಂ: 0820-2986168ನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.
Next Story





