ಮೀನುಗಾರ ನಾಪತ್ತೆ
ಮಂಗಳೂರು, ಅ.12: ಬೋಟ್‌ನಲ್ಲಿ ಸಮುದ್ರದಲ್ಲಿ ಮೀನುಗಾರಿಕೆಗೆಂದು ಸೋಮವಾರ ಬೆಳಗ್ಗೆ ತೆರಳಿದ್ದ ಮೀನುಗಾರರೊಬ್ಬರು ನಾಪತ್ತೆಯಾದ ಬಗ್ಗೆ ಪಾಂಡೇಶ್ವರ ಠಾಣೆಗೆ ದೂರು ದಾಖಲಾಗಿದೆ.
ವಾಹಿಲಾ ಆದಮ್ ನಾಪತ್ತೆಯಾದ ಮೀನುಗಾರ ಎಂದು ತಿಳಿದುಬಂದಿದೆ.
ಆದಮ್ ಇತರ 9 ಮಂದಿಯ ಜತೆಗೆ ಮೀನುಗಾರಿಕೆ ತೆರಳಿದ್ದರು. ಮೀನುಗಾರಿಕೆ ವೇಳೆ ನಾಪತ್ತೆಯಾಗಿದ್ದರು. ಅವರ ಪತ್ತೆಗೆ ಹುಡುಕಾಡಿದರೂ ಪ್ರಯೋಜನವಾಗಿಲ್ಲ ಎಂದು ತಿಳಿದು ಬಂದಿದೆ.
ಚಹರೆ: 5.3 ಅಡಿ ಎತ್ತರವಿದ್ದು, ಕಪ್ಪು ಕೂದಲು, ಗೋಧಿ ಮೈಬಣ್ಣ, ಸಾಧಾರಣ ಶರೀರ ಹೊಂದಿದ್ದು, ಕಪ್ಪು ಬಣ್ಣದ ಅರ್ಧ ಚಡ್ಡಿ, ಕಪ್ಪು ಮತ್ತು ನೀಲಿ ಮಿಶ್ರಿತ ಟಿ-ಶಟ್ ಧರಿಸಿದ್ದರು. ತೆಲುಗು ಭಾಷೆ ಮಾತನಾಡುತ್ತಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Next Story





