ಕಲ್ಲಿದ್ದಲು ಬಿಕ್ಕಟ್ಟಿನ ಕುರಿತ ವರದಿ ಸಂಪೂರ್ಣ ಆಧಾರರಹಿತ: ನಿರ್ಮಲಾ ಸೀತಾರಾಮನ್

ಬೋಸ್ಟನ್: ದೇಶದಲ್ಲಿ ಕಲ್ಲಿದ್ದಲು ಕೊರತೆಯ ಕುರಿತ ವರದಿಗಳ ನಡುವೆ ಪ್ರತಿಕ್ರಿಯಿಸಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಯಾವುದೇ ಕೊರತೆ ಇಲ್ಲ ಎಂದು ಒತ್ತಿ ಹೇಳಿದರು. "ಕಲ್ಲಿದ್ದಲು ಕೊರತೆ ಕುರಿತ ವರದಿಗಳು ಸಂಪೂರ್ಣ ಆಧಾರರಹಿತ. ಭಾರತದಲ್ಲಿ ಸಾಕಷ್ಟು ಇಂಧನ ಇದೆ'' ಎಂದು ಹೇಳಿದರು.
"ಕಲ್ಲಿದ್ದಲು ಕುರಿತಾದ ವರದಿಯು ಸಂಪೂರ್ಣ ಆಧಾರರಹಿತ! ಯಾವುದಕ್ಕೂ ಕೊರತೆಯಿಲ್ಲ. ವಾಸ್ತವವಾಗಿ, ನಾನು ಇಂಧನ ಸಚಿವ ಆರ್ .ಕೆ. ಸಿಂಗ್ ರ ಹೇಳಿಕೆಯನ್ನು ನೆನಪಿಸಿಕೊಂಡರೆ, ಪ್ರತಿ ವಿದ್ಯುತ್ ಉತ್ಪಾದನಾ ಘಟಕವು ಮುಂದಿನ ನಾಲ್ಕು ದಿನಗಳ ದಾಸ್ತಾನ್ ಅನ್ನು ತಮ್ಮ ಸ್ವಂತ ಆವರಣದಲ್ಲಿ ಸಂಪೂರ್ಣವಾಗಿ ಲಭ್ಯವಿರುತ್ತದೆ ಮತ್ತು ಪೂರೈಕೆ ಸರಪಳಿಯು ಮುರಿದುಹೋಗಿಲ್ಲ'' ಎಂದು ಸೀತಾರಾಮನ್ ಮಂಗಳವಾರ ಇಲ್ಲಿ ಹಾರ್ವರ್ಡ್ ಕೆನಡಿ ಶಾಲೆಯಲ್ಲಿ ಭಾರತದಲ್ಲಿ ಕಲ್ಲಿದ್ದಲು ದಾಸ್ತಾನು ಕಡಿಮೆಯಾದ ವರದಿಗಳ ಬಗ್ಗೆ ಪ್ರಶ್ನಿಸಿದಾಗ ಉತ್ತರಿಸಿದರು.
Next Story





