ಭಾರತದ ಆರ್ಥಿಕತೆ 2021ರಲ್ಲಿ ಶೇ 9.5ರಷ್ಟು ಹಾಗೂ 2022ರಲ್ಲಿ ಶೇ 8.5ರಷ್ಟು ಪ್ರಗತಿ ಸಾಧಿಸಲಿದೆ: ಐಎಂಎಫ್ ಅಂದಾಜು

ಸಾಂದರ್ಭಿಕ ಚಿತ್ರ (PTI)
ಹೊಸದಿಲ್ಲಿ: ಭಾರತದ ಆರ್ಥಿಕತೆ 2021ರಲ್ಲಿ ಶೇ 9.5ರಷ್ಟು ಹಾಗೂ 2022ರಲ್ಲಿ ಶೇ 8.5ರಷ್ಟು ಪ್ರಗತಿ ಸಾಧಿಸಲಿದೆ ಎಂದು ಅಂತರಾಷ್ಟ್ರೀಯ ಹಣಕಾಸು ಸಂಸ್ಥೆ (ಐಎಂಎಫ್) ಮಂಗಳವಾರ ಬಿಡುಗಡೆಗೊಳಿಸಿದ ತನ್ನ ವಲ್ರ್ಡ್ ಇಕನಾಮಿಕ್ ಔಟ್ಲುಕ್ ವರದಿಯಲ್ಲಿ ತಿಳಿಸಿದೆ.
ಜುಲೈ ತಿಂಗಳಿನಲ್ಲಿ ಬಿಡುಗಡೆಗೊಳಿಸಿದ ವರದಿಯಲ್ಲಿ ಐಎಂಎಫ್ ಮಾಡಿದ್ದ ಅಂದಾಜು ಹಾಗೂ ಮಂಗಳವಾರದ ವರದಿಯಲ್ಲಿ ಮಾಡಲಾಗಿರುವ ಅಂದಾಜು ಒಂದೇ ಆಗಿದೆ. ಆದರೆ ಭಾರತದ ಪ್ರಗತಿ ಪ್ರಮಾಣ 2021ರಲ್ಲಿ ಶೇ 12.5ರಷ್ಟು ಹಾಗೂ 2022ರಲ್ಲಿ ಶೇ6.9ರಷ್ಟು ಹೆಚ್ಚಾಗಲಿದೆ ಎಂದು ಎಪ್ರಿಲ್ನಲ್ಲಿನ ವರದಿಯಲ್ಲಿ ಐಎಂಎಫ್ ಹೇಳಿತ್ತು.
ಭಾರತವು ಲಸಿಕೆ ನೀಡಿಕೆಯಲ್ಲಿ ಉತ್ತಮ ಪ್ರಗತಿ ಸಾಧಿಸುತ್ತಿರುವುದರಿಂದ ಇದು ಆರ್ಥಿಕ ಅಭಿವೃದ್ಧಿಗೂ ಕಾರಣವಾಗಲಿದೆ ಎಂದು ಐಎಂಎಫ್ ಮುಖ್ಯ ಅರ್ಥಶಾಸ್ತ್ರಜ್ಞೆ ಗೀತಾ ಗೋಪಿನಾಥ್ ಹೇಳಿದ್ದಾರೆ.
ಜಾಗತಿಕ ಆರ್ಥಿಕತೆ 2021ರಲ್ಲಿ ಶೇ 5.9ರಷ್ಟು ಹಾಗೂ 2022ರಲ್ಲಿ ಶೇ 4.9ರಷ್ಟು ಪ್ರಗತಿ ಕಾಣಲಿದೆ ಎಂದು ಐಎಂಎಫ್ ವರದಿ ತಿಳಿಸಿದೆ.
Next Story