ಆಡಳಿತದ ನಿಷ್ಕ್ರಿಯತೆಯಿಂದ ಮನನೊಂದು ಉ.ಪ್ರ. ಸಿಎಂ ನಿವಾಸದ ಬಳಿ ವಿಷ ಸೇವಿಸಿದ ವ್ಯಕ್ತಿ

ಸಾಂದರ್ಭಿಕ ಚಿತ್ರ
ಲಕ್ನೊ: ಮೈನ್ಪುರಿ ನಗರದ ವ್ಯಕ್ತಿಯೊಬ್ಬ ಶನಿವಾರ ಲಕ್ನೊದ ಕಾಳಿದಾಸ್ ಮಾರ್ಗದಲ್ಲಿರುವ ಉತ್ತರ ಪ್ರದೇಶ ಮುಖ್ಯಮಂತ್ರಿ ನಿವಾಸದ ಬಳಿ ವಿಷಕಾರಿ ಪದಾರ್ಥ ಸೇವಿಸಿದ್ದಾನೆ ಎಂದು ವರದಿಯಾಗಿದೆ. ತನ್ನ ಭೂ ಕಬಳಿಕೆ ವಿಷಯದಲ್ಲಿ ಮೌನವಾಗಿದ್ದರಿಂದ ಆ ವ್ಯಕ್ತಿ ಜಿಲ್ಲಾಡಳಿತದ ಮೇಲೆ ಅಸಮಾಧಾನಗೊಂಡಿದ್ದ ಎನ್ನಲಾಗಿದೆ.
'ಹಿಂದೂಸ್ತಾನ್ ಟೈಮ್ಸ್' ನಲ್ಲಿ ಪ್ರಕಟವಾದ ವರದಿಯ ಪ್ರಕಾರ, ಆ ವ್ಯಕ್ತಿಯನ್ನು ತಕ್ಷಣವೇ ನಗರದ ಶ್ಯಾಮ ಪ್ರಸಾದ್ ಮುಖರ್ಜಿ (ಸಿವಿಲ್) ಆಸ್ಪತ್ರೆಗೆ ಕರೆದೊಯ್ಯಲಾಯಿತು. ವ್ಯಕ್ತಿಯ ಸ್ಥಿತಿ ಈಗ ಸ್ಥಿರವಾಗಿದೆ ಎಂದು ಹೇಳಲಾಗಿದೆ.
ವಿವರವಾದ ತನಿಖೆಯ ನಂತರ, ಆ ವ್ಯಕ್ತಿಯು ತನ್ನ ಭೂಮಿಯನ್ನು ಮೋಸದಿಂದ ಕಬಳಿಸಿದ ಜನರ ವಿರುದ್ಧ ಕ್ರಮಕ್ಕೆ ಒತ್ತಾಯಿಸುತ್ತಿದ್ದನೆಂದು ವರದಿಯಾಗಿದೆ. ಆರೋಪಿಗಳನ್ನು ಲಲ್ಲು ಯಾದವ್ ಮತ್ತು ರವಿ ಯಾದವ್ ಎಂದು ಗುರುತಿಸಲಾಗಿದ್ದು, ಅವರು ಆತನ ಭೂಮಿಯನ್ನು ಕಿತ್ತುಕೊಂಡು ತಮ್ಮ ಹೆಸರಿಗೆ ವರ್ಗಾಯಿಸಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.
Next Story