ಜೈಲಿನಲ್ಲಿದ್ದ ಸಾವರ್ಕರ್ ಜೊತೆ ಮಹಾತ್ಮ ಗಾಂಧಿ ಸಂವಹನ ನಡೆಸಿದ್ದು ಹೇಗೆ?: ಛತ್ತೀಸ್‌ಗಡ ಸಿಎಂ ಭೂಪೇಶ್ ಬಘೇಲ್
"ಎರಡು ರಾಷ್ಟ್ರಗಳ ಸಿದ್ಧಾಂತದ ಬಗ್ಗೆ ಮೊದಲು ಮಾತನಾಡಿದ್ದೇ ಸಾವರ್ಕರ್"

ಹೊಸದಿಲ್ಲಿ: ಮಹಾತ್ಮಾ ಗಾಂಧಿಯವರ ಸಲಹೆಯ ಮೇರೆಗೆ ಮಾಜಿ ಹಿಂದೂ ಮಹಾಸಭಾ ನಾಯಕ ಸಾವರ್ಕರ್ ಅವರು ಬ್ರಿಟಿಷ್ ಸರಕಾರದ ಮುಂದೆ ಕ್ಷಮಾದಾನ ಅರ್ಜಿ ಸಲ್ಲಿಸಿದ್ದರು ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿಕೆ ನೀಡಿದ ಒಂದು ದಿನದ ನಂತರ ಪ್ರತಿಕ್ರಿಯಿಸಿದ ಛತ್ತೀಸ್‌ಗಡದ ಮುಖ್ಯಮಂತ್ರಿ ಭೂಪೇಶ್ ಬಘೇಲ್, ಮಹಾತ್ಮ ಗಾಂಧೀಜಿಯವರು ಜೈಲಿನಲ್ಲಿದ್ದ ಸಾವರ್ಕರ್ ಅವರೊಂದಿಗೆ ಹೇಗೆ ಸಂವಹನ ನಡೆಸಲು ಸಾಧ್ಯ? ಎಂದು ವಾದಿಸಿದರು.
ಆ ಸಮಯದಲ್ಲಿ ಮಹಾತ್ಮ ಗಾಂಧಿ ಎಲ್ಲಿದ್ದರು ಹಾಗೂ ಸಾವರ್ಕರ್ ಎಲ್ಲಿದ್ದರು? ಆಗ ಸಾವರ್ಕರ್ ಜೈಲಿನಲ್ಲಿದ್ದರು. ಅವರು ಹೇಗೆ ಗಾಂಧಿಯೊಂಧಿಗೆ ಸಂವಹನ ನಡೆಸಿದರು? " ಎಂದು ಬಘೇಲ್ ಪ್ರಶ್ನಿಸಿದರು ಎಂದು ANI ವರದಿ ಮಾಡಿದೆ.
"ಅವರು (ಸಾವರ್ಕರ್) ಜೈಲಿನಿಂದ ಕ್ಷಮಾದಾನ ಅರ್ಜಿಗಳನ್ನು ಸಲ್ಲಿಸಿದ್ದರು ಹಾಗೂ ಅವರು ಬ್ರಿಟಿಷರೊಂದಿಗೆ ಮುಂದುವರಿದರು" ಎಂದು ಕಾಂಗ್ರೆಸ್ ನಾಯಕ ಹೇಳಿದರು.
1925 ರಲ್ಲಿ ಜೈಲಿನಿಂದ ಹೊರಬಂದ ನಂತರ ಎರಡು ರಾಷ್ಟ್ರಗಳ ಸಿದ್ಧಾಂತದ ಬಗ್ಗೆ ಮೊದಲು ಮಾತನಾಡಿದ್ದೇ ಸಾವರ್ಕರ್’ ಎಂದು ಬಘೇಲ್ ಹೇಳಿದರು.
Next Story