ಅರ್ಜಿ ಆಹ್ವಾನ
ಮಂಗಳೂರು, ಅ.13: ನಗರದ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಟಾಟಾ ಟೆಕ್ನಾಲಜೀಸ್ ಸಹಯೋಗದೊಂದಿಗೆ ಎಸೆಸೆಲ್ಸಿ ಉತ್ತೀರ್ಣರಾದವರಿಗೆ ಅತ್ಯಾಧುನಿಕ ಕೋರ್ಸ್‌ಗಳಲ್ಲಿ ತರಬೇತಿ ನೀಡಲು ಅರ್ಜಿ ಆಹ್ವಾನಿಸಲಾಗಿದೆ.
ಅತ್ಯಾಧುನಿಕ ಕೋರ್ಸ್‌ಗಳು: ಆಸಕ್ತರು ಎರಡು ವರ್ಷದ ಬ್ಯಾಟರಿ ಇಲೆಕ್ಟ್ರಿಕ್ ವೆಹಿಕಲ್ ಕೋರ್ಸ್ ಹಾಗೂ ಒಂದು ವರ್ಷದ ಇಂಡಸ್ಟ್ರಿಯಲ್ ರೋಬೊಟಿಕ್ ಮತ್ತು ಡಿಜಿಟಲ್ ಮ್ಯಾನುಫಾಕ್ಚರಿಂಗ್ ಕೋರ್ಸ್.
20 ರೂ.ಗಳನ್ನು ಪಾವತಿಸಿ, ಅರ್ಜಿ ಪಡೆದು ಕೊಳ್ಳಬಹುದು. ಅರ್ಜಿ ಸಲ್ಲಿಸಲು ಅ.21 ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗೆ ಸಂಸ್ಥೆಯನ್ನು ಖುದ್ದಾಗಿ ಅಥವಾ ದೂ.ಸಂ.: 0824-2216360/ 9845226485ನ್ನು ಸಂಪರ್ಕಿಸಬಹುದು ಎಂದು ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಂಶುಪಾಲರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story





