ಲೈಂಗಿಕ ಕಿರುಕುಳ ಆರೋಪ; ಕರ್ನಾಟಕ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ದ.ಕ.ಜಿಲ್ಲಾ ವ್ಯವಸ್ಥಾಪಕನ ಬಂಧನ

ಮಂಗಳೂರು, ಅ.14: ಯುವತಿಗೆ ಲೈಂಗಿಕ ಕಿರುಕುಳದ ಆರೋಪದಲ್ಲಿ ರಾಜ್ಯ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ದ.ಕ. ಜಿಲ್ಲಾ ವ್ಯವಸ್ಥಾಪಕ ಮುಹಮ್ಮದ್ ಫಾರೂಕ್ (47) ಎಂಬಾತನನ್ನು ಮಹಿಳಾ ಠಾಣೆಯ ಪೊಲೀಸರು ಬುಧವಾರ ರಾತ್ರಿ ಬಂಧಿಸಿದ್ದಾರೆ.
ನಿಗಮದ ಕಚೇರಿಯ ಯುವತಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇರೆಗೆ ಬಂಧಿಸಲಾಗಿದೆ.
ಆರೋಪಿ ಫಾರೂಕ್ ಕೆಲವು ಸಮಯದಿಂದ 20 ವರ್ಷ ಪ್ರಾಯದ ಸಿಬ್ಬಂದಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಎಂದು ದೂರಲಾಗಿದೆ. ಗುತ್ತಿಗೆ ಆಧಾರದ ಮೇಲೆ ಈ ಯುವತಿ ಕೆಲಸ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.
Next Story





