ಬ್ರೆಝಿಲ್ ದಂತಕತೆ ಪೀಲೆ ಅವರ ಅಂತರಾಷ್ಟ್ರೀಯ ಗೋಲ್ ದಾಖಲೆ ಮುರಿದ ಸುನೀಲ್ ಚೆಟ್ರಿ

Photo @afcasiancup
ಮಾಲೆ: ಈಗ ನಡೆಯುತ್ತಿರುವ 2021 ಸ್ಯಾಫ್ ಚಾಂಪಿಯನ್ಶಿಪ್ನಲ್ಲಿ ಬುಧವಾರ ನಡೆದ ಮಾಲ್ಡೀವ್ಸ್ ವಿರುದ್ಧದ ಪಂದ್ಯದಲ್ಲಿ ಭಾರತೀಯ ನಾಯಕ ಸುನೀಲ್ ಚೆಟ್ರಿ ಅವರು ಬ್ರೆಝಿಲ್ ಫುಟ್ಬಾಲ್ ದಂತಕತೆ ಪೀಲೆ ಅವರ ಅಂತರಾಷ್ಟ್ರೀಯ ಗೋಲ್ ದಾಖಲೆ ಯೊಂದನ್ನು ಮುರಿದರು.
ಬ್ರೆಝಿಲ್ಗಾಗಿ ಪೀಲೆ 77 ಗೋಲುಗಳನ್ನು ಗಳಿಸಿದ್ದರು. ಮಾಲ್ಡೀವ್ಸ್ ವಿರುದ್ಧದ ಪಂದ್ಯದಲ್ಲಿ 62 ನೇ ನಿಮಿಷದಲ್ಲಿ ಗೋಲು ಗಳಿಸಿದ ಚೆಟ್ರಿ ಬ್ರೆಝಿಲ್ನ ಸೂಪರ್ಸ್ಟಾರ್ ದಾಖಲೆ ಹಿಂದಿಕ್ಕಿದರು.
ಚೆಟ್ರಿ 79ನೇ ಅಂತರಾಷ್ಟ್ರೀಯ ಗೋಲುಗಳನ್ನು ಗಳಿಸಿದರು. ಇದರೊಂದಿಗೆ ಭಾರತದ ನಾಯಕ ಇದೀಗ ಗರಿಷ್ಠ ಗೋಲು ಗಳಿಸಿದ ಮೂರನೇ ಸಕ್ರಿಯ ಅಂತರ್ ರಾಷ್ಟ್ರೀಯ ಆಟಗಾರ ಎನಿಸಿಕೊಂಡರು.
ಲಿಯೊನೆಲ್ ಮೆಸ್ಸಿ (80) ಹಾಗೂ ಕ್ರಿಸ್ಟಿಯಾನೊ ರೊನಾಲ್ಡೊ (115) ಅಂತರಾಷ್ಟ್ರೀಯ ಗೋಲು ಗಳಿಸಿದವರ ಪಟ್ಟಿಯಲ್ಲಿ ಸಕ್ರಿಯವಾಗಿರುವ ಇನ್ನಿಬ್ಬರು ಆಟಗಾರರಾಗಿದ್ದಾರೆ. ಚೆಟ್ರಿ ವಿಶ್ವದಲ್ಲಿ ಜಂಟಿ ಆರನೇ ಅತಿ ಹೆಚ್ಚು ಗೋಲು ಗಳಿಸಿದ ಆಟಗಾರ ಎನಿಸಿ ಕೊಂಡಿದ್ದಾರೆ.
Next Story