ಅಕ್ಟೋಬರ್ 31 ರ ನಂತರ ಅವಧಿ ಮೀರಿದ ಚಾಲನಾ ಪರವಾನಗಿ, ವಾಹನ ದಾಖಲೆಗಳ ವಿಸ್ತರಣೆ ಇಲ್ಲ

ಹೊಸದಿಲ್ಲಿ: ಅಕ್ಟೋಬರ್ 31 ರ ನಂತರ ಅವಧಿ ಮೀರಿದ ವಾಹನ ಹಾಗೂ ಚಾಲಕ ಸಂಬಂಧಿತ ದಾಖಲೆಗಳಾದ ಚಾಲನಾ ಪರವಾನಗಿ (ಡಿಎಲ್), ನೋಂದಣಿ ಪ್ರಮಾಣಪತ್ರ (ಆರ್‌ಸಿ), ಪರವಾನಗಿಗಳು ಮತ್ತು ಫಿಟ್‌ನೆಸ್ ಪ್ರಮಾಣಪತ್ರಗಳ ಮೇಲೆ ಯಾವುದೇ ವಿಸ್ತರಣೆ ಇರುವುದಿಲ್ಲ ಎಂದು ರಸ್ತೆ ಸಾರಿಗೆ ಸಚಿವಾಲಯ ಗುರುವಾರ ತಿಳಿಸಿದೆ.
ಅವಧಿ ವಿಸ್ತರಣೆಯು ಪ್ರಸ್ತುತ ಕಳೆದ ಫೆಬ್ರವರಿ 1 ರಿಂದ ಮುಕ್ತಾಯ ದಿನಾಂಕ ಹೊಂದಿದ್ದ ದಾಖಲೆಗಳಿಗೆ ಅನ್ವಯಿಸುತ್ತದೆ.
"ಇದು ಕೊನೆಯ ವಿಸ್ತರಣೆಯೆಂದು ಸ್ಪಷ್ಟಪಡಿಸಲಾಗಿದೆ ಹಾಗೂ ಈ ನಿಟ್ಟಿನಲ್ಲಿ ಯಾವುದೇ ವಿಸ್ತರಣೆಯನ್ನು ಕೇಂದ್ರ ಸರಕಾರ ನೀಡುವುದಿಲ್ಲ" ಎಂದು ಸಚಿವಾಲಯ ಹೇಳಿದೆ.
ರಾಜ್ಯಗಳು ಅಥವಾ ಕೇಂದ್ರಾಡಳಿತ ಪ್ರದೇಶಗಳು ಅಂತಹ ವಿಸ್ತರಣೆಗಳನ್ನು ಇನ್ನೊಂದು ಅವಧಿಗೆ ಸೂಚಿಸಿದರೂ ಅವಧಿ ಮೀರಿದ ದಾಖಲೆಗಳನ್ನು ಹೊಂದಿರುವವರು ನಿರ್ದಿಷ್ಟ ರಾಜ್ಯ/ಕೇಂದ್ರಾಡಳಿತ ಪ್ರದೇಶಗಳ ಹೊರಗೆ ಸಿಲುಕಿಕೊಂಡರೆ ಕ್ರಮ ಕೈಗೊಳ್ಳಬಹುದು. ಏಕೆಂದರೆ ದೇಶಾದ್ಯಂತ ಯಾವುದೇ ಕೇಂದ್ರ ಅಧಿಸೂಚನೆ ಅನ್ವಯಿಸುವುದಿಲ್ಲ.
Next Story