ಜಾಗತಿಕ ಹಸಿವು ಸೂಚ್ಯಂಕ: 116 ದೇಶಗಳ ಪೈಕಿ ಭಾರತಕ್ಕೆ 101ನೇ ಸ್ಥಾನ

ಸಾಂದರ್ಭಿಕ ಚಿತ್ರ (PTI)
ಹೊಸದಿಲ್ಲಿ: ಜಾಗತಿಕ ಹಸಿವು ಸೂಚ್ಯಂಕದಲ್ಲಿ ಭಾರತವು 116 ದೇಶಗಳ ಪೈಕಿ 101ನೇ ಸ್ಥಾನದಲ್ಲಿದೆ. ಹಸಿವು ಒಂದು ಗಂಭೀರ ಸಮಸ್ಯೆಯಾಗಿರುವ 31 ದೇಶಗಳ ಪೈಕಿ ಭಾರತ ಒಂದಾಗಿದೆ. ಕಳೆದ ವರ್ಷ ಜಾಗತಿಕ ಹಸಿವು ಸೂಚ್ಯಂಕದಲ್ಲಿ ಭಾರತ 107 ದೇಶಗಳ ಪೈಕಿ 94ನೇ ಸ್ಥಾನದಲ್ಲಿತ್ತು.
ಈ ವರ್ಷ ಈ ಸೂಚ್ಯಂಕದಲ್ಲಿ ಭಾರತಕ್ಕಿಂತ ಕೆಳಗಿನ ಸ್ಥಾನಗಳಲ್ಲಿ ಪಪುವಾ ನ್ಯೂ ಗಿನಿ, ಅಫ್ಘಾನಿಸ್ತಾನ, ನೈಜೀರಿಯಾ, ಕಾಂಗೊ, ಮೊಝಾಂಬಿಕ್, ಸಿಯೆರ್ರಾ ಲಿಯೋನ್, ಟಿಮೋರ್-ಲೆಸ್ಟೆ, ಹೈಟಿ, ಲೈಬೀರಿಯಾ, ಮಡಗಾಸ್ಕರ್, ಕಾಂಗೋ ಗಣರಾಜ್ಯ, ಸೆಂಟ್ರಲ್ ಆಫ್ರಿಕನ್ ರಿಪಬ್ಲಿಕ್, ಯೆಮೆನ್ ಮತ್ತು ಸೊಮಾಲಿಯಾ ಇವೆ.
ಪಾಕಿಸ್ತಾನ ಈ ಜಾಗತಿಕ ಹಸಿವು ಸೂಚ್ಯಂಕದಲ್ಲಿ ಭಾರತಕ್ಕಿಂತ ಮೇಲಿನ ಸ್ಥಾನದಲ್ಲಿದೆ. ಪಾಕಿಸ್ತಾನದ ಸ್ಥಾನ 92 ಆಗಿದ್ದರೆ. ನೆರೆಯ ನೇಪಾಳ (76) ಹಾಗೂ ಬಾಂಗ್ಲಾದೇಶ (76) ಭಾರತಕ್ಕಿಂತ ಮೇಲಿನ ಸ್ಥಾನಗಳಲ್ಲಿವೆ.
ಸೊಮಾಲಿಯಾದಲ್ಲಿ ಗರಿಷ್ಠ ಹಸಿವಿನ ಸಮಸ್ಯೆಯಿದೆಯೆಂದು ತಿಳಿದು ಬಂದಿದ್ದು ಈ ಪಟ್ಟಿಯಲ್ಲಿ ಈ ದೇಶ ಕೊನೆಯ ಸ್ಥಾನದಲ್ಲಿದೆ. 2000ರಿಂದ ಜಾಗತಿಕ ಹಸಿವಿನ ಪ್ರಮಾಣ ಕಡಿಮೆಯಾಗುತ್ತಿದ್ದರೂ ಪ್ರಗತಿ ನಿಧಾನಗತಿಯಲ್ಲಿದೆ ಎಂದು ವರದಿ ತಿಳಿಸಿದೆ. ಜಾಗತಿಕ ಹಸಿವು ಸೂಚ್ಯಂಕ ಸ್ಕೋರ್ 2006 ಹಾಗೂ 2012 ನಡುವೆ 25.1ರಿಂದ 20.4ಗೆ ಕುಸಿದಿದ್ದರೆ 2012ರಿಂದೀಚೆಗೆ ಈ ಪ್ರಮಾಣ 2.5 ಅಂಕಗಳಷ್ಟು ಮಾತ್ರ ಕಡಿಮೆಯಾಗಿದೆ.







