ತಾಲಿಬಾನ್,ಚೀನಾ-ಪಾಕಿಸ್ತಾನದ ನಂಟಿನ ಬಗ್ಗೆ ಆರೆಸ್ಸೆಸ್ ಮುಖ್ಯಸ್ಥ ಭಾಗವತ್ ಕಳವಳ

ನಾಗಪುರ: ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಶುಕ್ರವಾರ ಅಫ್ಘಾನಿಸ್ತಾನದಲ್ಲಿನ ಭೌಗೋಳಿಕ-ರಾಜಕೀಯ ಬದಲಾವಣೆಗಳ ಬಗ್ಗೆ ಕಳವಳ ವ್ಯಕ್ತಪಡಿಸಿದರು ಹಾಗೂ ತಾಲಿಬಾನ್, ಪಾಕಿಸ್ತಾನ ಮತ್ತು ಚೀನಾದ ಉದ್ದೇಶವನ್ನು ಪ್ರಶ್ನಿಸಿದರು. ಗಡಿಯಲ್ಲಿ ನಮ್ಮ ಸೇನಾ ಸನ್ನದ್ಧತೆಯನ್ನು ಬಲಪಡಿಸಬೇಕು ಎಂದು ಹೇಳಿದರು.
"ತಾಲಿಬಾನ್ ಇತಿಹಾಸ ನಮಗೆ ತಿಳಿದಿದೆ. ಚೀನಾ ಹಾಗೂ ಪಾಕಿಸ್ತಾನ ಇಂದಿಗೂ ಅದನ್ನು ಬೆಂಬಲಿಸುತ್ತವೆ. ತಾಲಿಬಾನ್ ಬದಲಾದರೂ ಪಾಕಿಸ್ತಾನ ಬದಲಾಗಲ್ಲ. ಭಾರತದ ಬಗೆಗಿನ ಚೀನಾದ ಉದ್ದೇಶ ಬದಲಾಗಿದೆಯೇ? ಆದರೆ ಮಾತುಕತೆಗಳು ನಡೆಯಲೇಬೇಕು. ಆದರೆ ನಾವು ಎಚ್ಚರವಾಗಿರಬೇಕು, ಜಾಗರೂಕರಾಗಿರಬೇಕು ಹಾಗೂ ಸಿದ್ಧರಾಗಿರಬೇಕು’’ ಎಂದು ತನ್ನ ವಾರ್ಷಿಕ ವಿಜಯ ದಶಮಿಯ ಭಾಷಣದಲ್ಲಿ ಆರ್ ಎಸ್ ಎಸ್ ಮುಖ್ಯಸ್ಥರು ಹೇಳಿದ್ದಾರೆ
" ಈಗ ಚೀನಾ, ಪಾಕಿಸ್ತಾನ ಹಾಗೂ ಟರ್ಕಿ ತಾಲಿಬಾನ್ ಜೊತೆ ಅಪವಿತ್ರ ಒಕ್ಕೂಟದಲ್ಲಿ ಒಗ್ಗೂಡಿವೆ. ನಮ್ಮ ವಾಯುವ್ಯ ಗಡಿಗಳು ಮತ್ತೊಮ್ಮೆ ಗಂಭೀರ ಕಳವಳಕಾರಿ ವಿಷಯವಾಗಿದೆ . ಗಡಿ ಭದ್ರತೆಯನ್ನು ಕೇವಲ ಭೂ ಗಡಿಯಲ್ಲಿ ಮಾತ್ರವಲ್ಲದೆ ಮೌನ ದಾಳಿ ನಡೆಯುವ ಕರಾವಳಿಯಲ್ಲೂ ಬಲಪಡಿಸಬೇಕಾಗಿದೆ’’ ಎಂದು ಭಾಗತವ್ ಹೇಳಿದರು.
“ಗಡಿಯಾಚೆಗಿನ ಕಾನೂನುಬಾಹಿರ ಒಳನುಸುಳುವಿಕೆಯನ್ನು ಸಂಪೂರ್ಣವಾಗಿ ತಡೆಗಟ್ಟಬೇಕು. ರಾಷ್ಟ್ರೀಯ ನಾಗರಿಕ ನಿಯತಕಾಲಿಕವನ್ನು ರಚಿಸುವ ಮೂಲಕ ಈ ಒಳನುಸುಳುಕೋರರು ಪೌರತ್ವ ಹಕ್ಕುಗಳಿಂದ ವಂಚಿತರಾಗಬೇಕು’’ ಎಂದು ಹೇಳಿದರು.







