ಪೆಟ್ರೋಲ್-ಡೀಸೆಲ್ ದರ ಸತತ ಎರಡನೇ ದಿನ ಏರಿಕೆ

ಹೊಸದಿಲ್ಲಿ:ಜಾಗತಿಕ ಕಚ್ಚಾ ತೈಲ ದರ ಏರಿಕೆಯ ನಂತರ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಗಳು ಸತತ ಎರಡನೇ ದಿನ ಶುಕ್ರವಾರದಂದು ಏರಿಕೆಯಾಗಿದೆ. 11 ದಿನಗಳಲ್ಲಿ 9ನೇ ಬಾರಿ ಇಂಧನ ದರ ಏರಿಕೆಯಾಗಿದೆ.
ಭಾರತೀಯ ತೈಲ ನಿಗಮದ ಪ್ರಕಾರ ರಾಷ್ಟ್ರ ರಾಜಧಾನಿಯಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ದರಗಳು 35 ಪೈಸೆ ಏರಿಕೆಯಾಗಿ ಕ್ರಮವಾಗಿ ರೂ. 105.14 ಮತ್ತು ರೂ. 93.87 ಕ್ಕೆ ತಲುಪಿದೆ. ಗುರುವಾರ ದರಗಳನ್ನು 35 ಪೈಸೆ ಹೆಚ್ಚಿಸಲಾಗಿತ್ತು.
ಮುಂಬೈನಲ್ಲಿ ಪೆಟ್ರೋಲ್ ಬೆಲೆ 34 ಪೈಸೆ ಹೆಚ್ಚಾಗಿದ್ದು, ಪ್ರತಿ ಲೀಟರ್‌ಗೆ ರೂ. 111.09 ಆಗಿದೆ. ಡೀಸೆಲ್ ದರ 38 ಪೈಸೆ ಏರಿಕೆಯಾಗಿ ರೂ. 101.78 ಕ್ಕೆ ತಲುಪಿದೆ. ನಾಲ್ಕು ಮೆಟ್ರೋ ನಗರಗಳ ಪೈಕಿ ಮುಂಬೈನಲ್ಲಿ ಇಂಧನ ದರಗಳು ಅತ್ಯಧಿಕವಾಗಿದೆ ಎಂದು ಸರಕಾರಿ ಸ್ವಾಮ್ಯದ ತೈಲ ಸಂಸ್ಕರಣಾಗಾರ ಹೇಳಿದೆ. ಮೌಲ್ಯವರ್ಧಿತ ತೆರಿಗೆ ಅಥವಾ ವ್ಯಾಟ್ ನಿಂದಾಗಿ ವಿವಿಧ ರಾಜ್ಯಗಳಲ್ಲಿ ದರಗಳು ಬದಲಾಗುತ್ತವೆ.
Next Story