ಸಿಂಘು ಗಡಿಯಲ್ಲಿ ವ್ಯಕ್ತಿಯೊಬ್ಬನ ಹತ್ಯೆ:ರೈತ ನಾಯಕ ಟಿಕಾಯತ್ ರನ್ನು ದೂಷಿಸಿದ ಅಮಿತ್ ಮಾಳವೀಯ

photo: twitter
ಹೊಸದಿಲ್ಲಿ: ಹರಿಯಾಣದ ಸೋನಿಪತ್ ಜಿಲ್ಲೆಯ ಕುಂಡ್ಲಿಯ ಸಿಂಘು ಗಡಿಯಲ್ಲಿ ರೈತರ ಪ್ರತಿಭಟನಾ ಸ್ಥಳದ ಬಳಿ ವ್ಯಕ್ತಿಯೊಬ್ಬ ಇಂದು ಬೆಳಗ್ಗೆ ಹತ್ಯೆಗೈದ ಸ್ಥಿತಿಯಲ್ಲಿ ಕಂಡುಬಂದಿದ್ದಾನೆ. ಬಿಜೆಪಿ ಮಾಹಿತಿ ಹಾಗೂ ತಂತ್ರಜ್ಞಾನ ವಿಭಾಗದ ಉಸ್ತುವಾರಿ ಅಮಿತ್ ಮಾಳವೀಯ ಈ ಕುರಿತಂತೆ ರೈತ ನಾಯಕ ರಾಕೇಶ್ ಟಿಕಾಯತ್ ಅವರನ್ನು ದೂಷಿಸಿದರು.
"ರಾಕೇಶ್ ಟಿಕಾಯತ್ ಅವರು ಲಖಿಂಪುರದಲ್ಲಿ ಗುಂಪು ಹತ್ಯೆಯನ್ನು ಸಮರ್ಥಿಸದೇ ಇರುತ್ತಿದ್ದರೆ, ಇಂತಹ ಘೋರ ಹತ್ಯೆ ಸಂಭವಿಸುತ್ತಿರಲಿಲ್ಲ. ಕಿಸಾನ್ ಆಂದೋಲನದ ಹೆಸರಲ್ಲಿ ಈ ರೀತಿಯ ಅರಾಜಕತೆ ನಡೆಸುವ ಜನರು ಯಾರು? ಅದನ್ನು ಬಹಿರಂಗಪಡಿಸಬೇಕಾಗಿದೆ'' ಎಂದು ಮಾಳವೀಯ ಹೇಳಿದರು.
ರಾಕೇಶ್ ಟಿಕಾಯತ್ ಇತ್ತೀಚೆಗೆ ಉತ್ತರಪ್ರದೇಶದ ಲಖಿಂಪುರ್ ಖೇರಿಯಲ್ಲಿ ಬಿಜೆಪಿ ಕಾರ್ಯಕರ್ತರನ್ನು ಹತ್ಯೆಗೈದಿರುವುದು ಕೇವಲ "ಕ್ರಿಯೆಗೆ ತಕ್ಕ ಪ್ರತಿಕ್ರಿಯೆ" ಎಂದು ಹೇಳಿದ್ದರು.
ಅಕ್ಟೋಬರ್ 3 ರಂದು ಉತ್ತರಪ್ರದೇಶದ ಲಖಿಂಪುರ ಖೇರಿಯಲ್ಲಿ ನಡೆದಿದ್ದ ಹಿಂಸಾಚಾರದಲ್ಲಿ ನಾಲ್ವರು ರೈತರು, ಇಬ್ಬರು ಬಿಜೆಪಿ ಕಾರ್ಯಕರ್ತರು, ಕೇಂದ್ರ ಸಚಿವ ಅಜಯ್ ಮಿಶ್ರಾ ಅವರ ಉದ್ಯೋಗಿ ಹಾಗೂ ಒಬ್ಬ ಸ್ಥಳೀಯ ವರದಿಗಾರನನ್ನು ಹತ್ಯೆಗೈಯ್ಯಲಾಗಿತ್ತು.
Had Rakesh Tikait not justified mob lynching in Lakhimpur, with Yogendra Yadav, sitting next to him, maintaining sanctimonious silence, the gory murder of a youth at Kundali border would not have happened. Anarchists behind these protests in the name of famers need to be exposed. https://t.co/YkchLIQxgY
— Amit Malviya (@amitmalviya) October 15, 2021