ಸುರತ್ಕಲ್: ಶಾಸಕ ಭರತ್ ಶೆಟ್ಟಿಯ ಕಚೇರಿ ಶುಭಾರಂಭ

ಮಂಗಳೂರು, ಅ.15: ಮಂಗಳೂರು ನಗರ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ವೈ ಭರತ್ ಶೆಟ್ಟಿ ಅವರ ದ್ವಿತೀಯ ಅಧಿಕೃತ ಕಚೇರಿಯು ಮನಪಾ ಸುರತ್ಕಲ್ ವಲಯ ಕಚೇರಿಯ ನೂತನ ಕಟ್ಟಡದಲ್ಲಿ ಶುಕ್ರವಾರ ಶುಭಾರಂಭಗೊಂಡಿತು.
ಬಿಜೆಪಿಯ ಹಿರಿಯ ಮುಖಂಡ ಕಾಳಪ್ಪ ಗೌಡ ಕಚೇರಿ ಉದ್ಘಾಟಿಸಿದರು.
ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳಿನ್ ಕುಮಾರ್ ಕಟೀಲ್ ಮಾತನಾಡಿ ಜನರ ನಿರಂತರ ಸಂಪರ್ಕಕ್ಕಾಗಿ ಮಂಗಳೂರಿನಲ್ಲಿ ಕಚೇರಿ ಹೊಂದಿರುವ ಶಾಸಕರು ಇದೀಗ ಸುರತ್ಕಲ್, ಕಾವೂರು ಸುತ್ತಮುತ್ತಲಿನ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸುರತ್ಕಲ್‌ನಲ್ಲಿಯೂ ಸುಸಜ್ಜಿತ ಕಚೇರಿ ಆರಂಭಿಸಿರುವ ಬಗ್ಗೆ ಶ್ಲಾಘಿಸಿದರು.
ವಿಧಾನ ಪರಿಷತ್‌ನ ಮಾಜಿ ಸದಸ್ಯ ಬಾಲಕೃಷ್ಣ ಭಟ್, ಮಂಗಳೂರು ಉತ್ತರ ಮಂಡಲದ ಅಧ್ಯಕ್ಷ ತಿಲಕ್ ರಾಜ್ ಕೃಷ್ಣಾಪುರ, ಉದ್ಯಮಿ ಸುಭಾಶ್ಚಂದ್ರ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
Next Story





