ದರ್ಸ್‍ಗಳಿಂದ ಸಂಸ್ಕಾರಯುತ ಶಿಕ್ಷಣ ಲಭ್ಯ: ಎಸ್.ಬಿ. ದಾರಿಮಿ

ಪುತ್ತೂರು: ದರ್ಸ್‍ಗಳ ಸ್ಥಾಪನೆಯಿಂದಾಗಿ ಮಕ್ಕಳಲ್ಲಿ ಸಂಸ್ಕಾರಯುತ ಶಿಕ್ಷಣ ಲಭ್ಯವಾಗಲಿದೆ. ಹಿಂದೆಲ್ಲಾ ಮೊಹಲ್ಲಾಗಳಲ್ಲಿ ಇದ್ದ ದರ್ಸ್ ಪದ್ಧತಿ ಇದೀಗ ಕಡಿಮೆಯಾಗುತ್ತಿದೆ. ಮರಣದ ಮನೆಯಲ್ಲಿ ಓದುವುದಕ್ಕೂ ಪ್ರಸ್ತುತ ಮುತಅಲ್ಲಿಂಗಳು ಸಿಗದಂತಾಗಿದ್ದು, ಈ ನಿಟ್ಟಿನಲ್ಲಿ ಧಾರ್ಮಿಕವಾಗಿ ಕೊರತೆಯಾಗಿ ಕಾಡುತ್ತಿರುವ ದರ್ಸ್‍ಗಳ ಸ್ಥಾಪನೆಗೆ ಮೊಹಲ್ಲಗಳ ಆಡಳಿತ ಮಂಡಳಿಗಳು ಮುಂದೆ ಬರಬೇಕು ಎಂದು ದಾರಿಮಿ ಎಸೋಸಿಯೇಶನ್ ರಾಜ್ಯ ಅಧ್ಯಕ್ಷ ಎಸ್.ಬಿ. ಮುಹಮ್ಮದ್ ದಾರಿಮಿ ಹೇಳಿದರು.
ಅವರು ಗುರುವಾರ ನೀರಾಜೆ ನೂರುಲ್ ಹುದಾ ಮಸೀದಿ ಮತ್ತು ಮದ್ರಸ ಇದರ ಅಧೀನದಲ್ಲಿ ಸ್ಥಾಪನೆಗೊಂಡ `ಮಂಬಯಲ್ ಉಲೂಂ ದರ್ಸ್' ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಸಮಸ್ತ ಕೇಂದ್ರ ಮುಶಾವರ ಸದಸ್ಯ ಶೈಖುನಾ ಕೆ.ಕೆ. ಮಾಹಿನ್ ಮುಸ್ಲಿಯಾರ್ (ತೊಟ್ಟಿ ಉಸ್ತಾದ್) ವಿದ್ಯಾರ್ಥಿಗಳಿಗೆ ಪಾಠ ಹೇಳಿಕೊಡುವ ಮೂಲಕ ದರ್ಸ್ ಉದ್ಘಾಟಿಸಿ ಮಾತನಾಡಿ ಕಲಿಕೆಗೆ ಯಾವತ್ತೂ ಕೊನೆ ಇಲ್ಲ, ಕಲಿಕೆಯೇ ನಮ್ಮ ಜ್ಞಾನವನ್ನು ವೃದ್ಧಿಸುತ್ತದೆ ಜೊತೆಗೆ ಕಲಿಕೆ ಪ್ರಾರ್ಥನೆಯೂ ಆಗಿರುತ್ತದೆ ಎಂದ ಅವರು ದರ್ಸ್ ವ್ಯವಸ್ಥೆಯನ್ನು ಮುನ್ನಡೆಸಲು ಎಲ್ಲರೂ ಸಹಕಾರಿ ಗಳಾಗಬೇಕು ಎಂದರು.
ನೀರಾಜೆ ನೂರುಲ್ ಹುದಾ ಮಸೀದಿ ಮತ್ತು ಮದ್ರಸ ಸಮಿತಿಯ ಗೌರವಾಧ್ಯಕ್ಷ ಸಯ್ಯದ್ ಮುಹಮ್ಮದ್ ಜುನೈದ್ ಜಿಫ್ರಿ ತಂಙಳ್ ಫೈಝಿ ಆತೂರು ಅಧ್ಯಕ್ಷತೆ ವಹಿಸಿ ದುವಾ ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಜೋಕಟ್ಟೆ ಮಸೀದಿ ಮುದರ್ರಿಸ್ ಅಬ್ದುಲ್ ರಹಿಮಾನ್ ದಾರಿಮಿ ಅಲ್‍ಹೈತಮಿ, ನೂರುಲ್ ಹುದಾ ಮಸೀದಿಯ ಮುದರ್ರಿಸ್ ಮುಹಮ್ಮದ್ ಜಾಬಿರ್ ಫೈಝಿ, ಸದರ್ ಮುಅಲ್ಲಿಂ ಮುಹಮ್ಮದ್ ಹಾರಿಸ್ ಮುಸ್ಲಿಯಾರ್, ದ.ಕ. ಜಿಲ್ಲಾ ವಿಕಾಯ ಅಧ್ಯಕ್ಷ ಇಸ್ಮಾಯಿಲ್ ತಂಙಳ್, ಜಂಇಯ್ಯತುಲ್ ಮುಅಲ್ಲಿಮೀನ್ ಅಧ್ಯಕ್ಷ ಕೆ.ಎಂ. ಹನೀಫ್ ಪಾಝಿಲ್ ಹನೀಫಿ, ಗಂಡಿಬಾಗಿಲು ಮಸೀದಿ ಖತೀಬ್, ಅಬ್ದುಲ್ ಹಮೀದ್ ಸೌಕತ್ ಆಲಿ ಫೈಝಿ ಸೇರಿದಂತೆ ಹಲವಾರು ಗಣ್ಯರು ಪಾಲ್ಗೊಂಡರು.
ರೇಂಜ್ ಜಂಇಯ್ಯತ್ತುಲ್ ಮುಅಲ್ಲಿಮೀನ್ ಕಾರ್ಯದರ್ಶಿ ಕೆ.ಎಂ. ಸಿದ್ದಿಕ್ ಫೈಝಿ ಸ್ವಾಗತಿಸಿದರು. ನೀರಾಜೆ ಮಸೀದಿ ಉಪಾಧ್ಯಕ್ಷ ಸಿದ್ದಿಕ್ ಎನ್. ವಂದಿಸಿದರು. ಶರೀಫ್ ನೀರಾಜೆ, ರಫೀಕ್ ಗೋಳಿತ್ತಡಿ ಕಾರ್ಯಕ್ರಮ ನಿರೂಪಿಸಿದರು.







