ಚಿಂತಕ, ಜಮಾಅತೆ ಇಸ್ಲಾಮಿ ಹಿಂದ್ ನಾಯಕ ಟಿ.ಕೆ.ಅಬ್ದುಲ್ಲಾ ಸಾಹಿಬ್ ನಿಧನ

ಕ್ಯಾಲಿಕಟ್ : ಧಾರ್ಮಿಕ ಚಿಂತಕ, ಜಮಾಅತೇ ಇಸ್ಲಾಮಿ ಹಿಂದ್ ನ ಹಿರಿಯ ಮುಖಂಡ, ಆಲ್ ಇಂಡಿಯಾ ಮುಸ್ಲಿಮ್ ಪರ್ಸನಲ್ ಲಾ ಬೋರ್ಡ್ ಸ್ಥಾಪಕ ಸದಸ್ಯ ಟಿ.ಕೆ. ಅಬ್ದುಲ್ಲಾ ಸಾಹಿಬ್ ಶುಕ್ರವಾರ ಇಲ್ಲಿ ನಿಧನರಾದರು. ಅವರಿಗೆ 94 ವರ್ಷ ವಯಸ್ಸಾಗಿತ್ತು.
1972ರಿಂದ 1984ರ ನಡುವೆ ಹಲವಾರು ವರ್ಷಗಳ ಕಾಲ ಜಮಾಅತೇ ಇಸ್ಲಾಮಿ ಹಿಂದ್ ಸಂಘಟನೆಯ ಕೇರಳ ರಾಜ್ಯಾಧ್ಯಕ್ಷರಾಗಿದ್ದ ಅವರು, ಕೋಝಿಕ್ಕೋಡ್ ಆಯಂಜೇರಿಯ ಧಾರ್ಮಿಕ ಪಂಡಿತ ತರಕ್ಕಂಡಿ ಅಬ್ದುಲ್ ರಹ್ಮಾನ್ ಮುಸ್ಲಿಯಾರ್ ಮತ್ತು ಫಾತಿಮಾ ದಂಪತಿಯ ಪುತ್ರ.
ಅಲಿಯಾ ಅರಬಿಕ್ ಕಾಲೇಜ್ ಮತ್ತಿತರ ವಿವಿಧ ಧಾರ್ಮಿಕ ಕಾಲೇಜುಗಳಲ್ಲಿ ವಿದ್ಯಾಭ್ಯಾಸ ಪಡೆದ ಮೃತರು, "ಪ್ರಬೋಧನಂ" ವಾರಪತ್ರಿಕೆಯ ಸಂಪಾದಕರಾಗಿ ಹಲವು ವರ್ಷಗಳ ಕಾಲ ಸೇವೆಗೈದಿದ್ದರು. ಪ್ರಖರ ವಾಗ್ಮಿ, ವಿಶ್ಲೇಷಕರಾಗಿದ್ದ ಅವರು , ಹಲವಾರು ಗ್ರಂಥಗಳನ್ನು ರಚಿಸಿದ್ದರು.
ಮೃತರು ಪತ್ನಿ ಕುಞಾಮಿನಾ, ಮಕ್ಕಳಾದ ಟಿ.ಕೆ.ಎಂ.ಇಖ್ಬಾಲ್, ಟಿ.ಕೆ.ಫಾರೂಖ್, ಸಾಜಿದಾ ಮತ್ತು ಅಪಾರ ಬಂದು ಮಿತ್ರರನ್ನು ಅಗಲಿದ್ದಾರೆ.
Next Story





