ಮಂಗಳೂರು : ಅ.16ರಂದು 'ಹಾಫಿಝ್ ಟು ಐಎಎಸ್' ಕುರಿತು ಕಾರ್ಯಾಗಾರ

ಮಂಗಳೂರು, ಅ.15: ಶಾಹೀನ್ ಗ್ರೂಪ್ ಆಫ್ ಇನ್‌ಸ್ಟಿಟ್ಯೂಶನ್ಸ್ ಮತ್ತು ಹಿದಾಯ ಫೌಂಡೇಶನ್ ವತಿಯಿಂದ "ಹಾಫಿಝ್ ಟು ಐಎಎಸ್" ಕಾರ್ಯಾಗಾರವು ಅ.16ರಂದು ಬೆಳಗ್ಗೆ 9:30ರಿಂದ ಮಧ್ಯಾಹ್ನ 12:30ರವರೆಗೆ ನಗರದ ಕಂಕನಾಡಿಯ ಜಂಇಯ್ಯತುಲ್ ಫಲಾಹ್ ಸಭಾಂಗಣದಲ್ಲಿ ನಡೆಯಲಿದೆ.
ಕುರ್ ಆನ್ ಕಂಠಪಾಠ ಮಾಡುವ ಹಾಫಿಝ್ ಗಳು ವೈದ್ಯಕೀಯ, ಇಂಜಿನಿಯರಿಂಗ್ ಮತ್ತಿತರ ವೃತ್ತಿಪರ ಕೋರ್ಸ್‌ಗಳಿಗೆ ಹಾಗು ನಾಗರೀಕ ಸೇವೆಗಳಿಗೆ ಹೇಗೆ ಹೋಗಬಹುದು ಎಂಬುದಕ್ಕೆ ಸಂಬಂಧಿಸಿದಂತೆ ಕಾರ್ಯಾಗಾರ ನಡೆಯಲಿದೆ.
ಶಾಹೀನ್ ಗ್ರೂಪ್ ಆಫ್ ಇನ್‌ಸ್ಟಿಟ್ಯೂಶನ್ಸ್ ಇದರ ಅಧ್ಯಕ್ಷ ಅಬ್ದುಲ್ ಖದೀರ್ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಶಾಹೀನ್ ಕಿಡ್ಸ್ ನಿರ್ದೇಶಕ ಮತ್ತು ಹೊಸದಿಲ್ಲಿಯ ಮರ್ಕಝಿ ತಾಲೀಮಿ ಬೋರ್ಡ್‌ನ ಕಾರ್ಯದರ್ಶಿ ಸೈಯದ್ ತನ್ವೀರ್ ಅಹ್ಮದ್ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಹಿದಾಯ ಅಕಾಡಮಿಯ ಎಚ್ಒಡಿ ಮೌಲಾನ ಶೊಹೈಬ್ ಹುಸೈನಿ ನದ್ವಿ, ಇಖ್ರಾ ಅರಬಿಕ್ ಇನ್ಸ್‌ಟಿಟ್ಯೂಶನ್‌ನ ಪ್ರಾಂಶುಪಾಲ ಮೌಲಾನ ಸಾಲಿಮ್ ನದ್ವಿ, ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಎಸ್.ಎಂ. ರಶೀದ್ ಹಾಜಿ, ಹಿದಾಯ ಫೌಂಡೇಶನ್ ಅಧ್ಯಕ್ಷ ಮನ್ಸೂರ್ ಅಹ್ಮದ್ ಆಝಾದ್ ಭಾಗವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.
ಕಾರ್ಯಾಗಾರದಲ್ಲಿ ಭಾಗವಹಿಸುವವರು ಗೂಗಲ್ ಫಾರ್ಮ್‌ನಲ್ಲಿ ನೋಂದಣಿ ಮಾಡಿಕೊಳ್ಳಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ 0824-4261319, 8867353144ನ್ನು ಸಂಪರ್ಕಿಸಲು ಪ್ರಕಟನೆ ತಿಳಿಸಿದೆ.







