ದ.ಕ. ಜಿಲ್ಲೆ : ಕೋವಿಡ್‌ಗೆ ಓರ್ವ ಬಲಿ; 36 ಮಂದಿಗೆ ಕೊರೋನ ಸೋಂಕು

ಮಂಗಳೂರು, ಅ.15: ದ.ಕ. ಜಿಲ್ಲೆಯಲ್ಲಿ ಕೊರೋನ ಸೋಂಕಿಗೆ ಓರ್ವ ಬಲಿಯಾಗಿದ್ದು, 36 ಮಂದಿಗೆ ಸೋಂಕು ತಗುಲಿದೆ.
ಜಿಲ್ಲೆಯಲ್ಲಿ 49 ಮಂದಿ ಗುಣಮುಖರಾಗಿದ್ದು, ಶೇ.0.49 ಪಾಸಿಟಿವಿಟಿ ದರ ದಾಖಲಾಗಿದೆ. ಜಿಲ್ಲೆಯ 1,15,030 ಸೋಂಕಿತರ ಪೈಕಿ 1,12,996 ಮಂದಿ ಗುಣಮುಖರಾಗಿದ್ದಾರೆ. ಕೋವಿಡ್‌ಗೆ ಇಲ್ಲಿಯವರೆಗೆ 1,675 ಮಂದಿ ಮೃತಪಟ್ಟಿದ್ದಾರೆ. 359 ಸಕ್ರಿಯ ಪ್ರಕರಣಗಳಿವೆ ಎಂದು ಜಿಲ್ಲಾಡಳಿತದ ಪ್ರಕಟನೆ ತಿಳಿಸಿದೆ.
Next Story





