ಜೆಇಇ ಫಲಿತಾಂಶ ಪ್ರಕಟ: ಮೃದುಲ್ ಅಗರ್ವಾಲ್ ದೇಶಕ್ಕೆ ಪ್ರಥಮ

photo: twitter
ಹೊಸದಿಲ್ಲಿ, ಅ.15: ಎಂಜಿನಿಯರಿಗ್ ಕೋರ್ಸ್ಗಳ ಪ್ರವೇಶಕ್ಕೆ ನಡೆಸುವ ಜೆಇಇ ಅಡ್ವಾನ್ಸ್ಡ್ ಪರೀಕ್ಷೆಯ ಫಲಿತಾಂಶ ಶುಕ್ರವಾರ (ಇಂದು)ಪ್ರಕಟವಾಗಿದ್ದು, ದೆಹಲಿಯ ಐಐಟಿಯ ಮೃದುಲ್ ಅಗರ್ವಾಲ್ ಅತ್ಯಧಿಕ ಅಂಕವನ್ನು ಗಳಿಸುವ ಮೂಲಕ ದೇಶದಲ್ಲಿ ಮೊದಲ ಸ್ಥಾನ ಪಡೆದಿದ್ದಾರೆ.
ಜೆಇಇ ಅಡ್ವಾನ್ಸ್ಡ್ ಪರೀಕ್ಷೆಯಲ್ಲಿ 360ಗಳಲ್ಲಿ 348 ಅಂಕಗಳನ್ನು ಪಡೆಯುವ ಮೂಲಕ ಮೃದುಲ್ ಅಗರ್ವಾಲ್ ದೇಶದಲ್ಲೇ ಅಗ್ರ ಸ್ಥಾನ ಪಡೆದುಕೊಂಡಿದ್ದಾರೆ. ವಿದ್ಯಾರ್ಥಿನಿಯರಲ್ಲಿ ಕಾವ್ಯಾ ಚೋಪ್ರಾ ದೇಶದಲ್ಲಿ ಮೊದಲ ಸ್ಥಾನ ಪಡೆದಿದ್ದಾರೆ. 360 ಅಂಕಗಳಲ್ಲಿ 286 ಅಂಕಗಳನ್ನು ಗಳಿಸುವ ಮೂಲಕ ಅವರು 98ನೇ ಸ್ಥಾನ ಪಡೆದುಕೊಂಡಿದ್ದಾರೆ.
ಕರ್ನಾಟಕದ ಮೊದಲ 10 ಶ್ರೇಯಾಂಕಿತ ವಿದ್ಯಾರ್ಥಿಗಳ ಪೈಕಿ ಬೆಂಗಳೂರಿನ ಎಫ್ಐಐಟಿಜೆಇಇ ಕೇಂದ್ರದ 7 ವಿದ್ಯಾರ್ಥಿಗಳು ಇದ್ದಾರೆ. ಅಲ್ಲದೇ ಕೇಂದ್ರದ 103 ವಿದ್ಯಾರ್ಥಿಗಳು ಜೆಇಇ ಅಡ್ವಾನ್ಸ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ.
ಒಟ್ಟು 1,41,699 ವಿದ್ಯಾರ್ಥಿಗಳು ಪ್ರವೇಶ ಪರೀಕ್ಷೆಯ ಎರಡೂ ಪತ್ರಿಕೆಗಳಿಗೆ ಹಾಜರಾಗಿದ್ದರು.
Next Story