ಡೆಂಗಿ ಪೀಡಿತರಾಗಿದ್ದ ಮನಮೋಹನ್ ಸಿಂಗ್ ಆರೋಗ್ಯದಲ್ಲಿ ಸುಧಾರಣೆ: ಏಮ್ಸ್ ಅಧಿಕಾರಿ

ಹೊಸದಿಲ್ಲಿ: ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಡೆಂಗಿ ಇರುವುದು ಪತ್ತೆಯಾಗಿದೆ. ಆದರೆ ಅವರ ಆರೋಗ್ಯ ಸ್ಥಿತಿ ಸುಧಾರಿಸುತ್ತಿದೆ ಎಂದು ಏಮ್ಸ್ ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.
89 ವರ್ಷದ ಕಾಂಗ್ರೆಸ್ ನಾಯಕನನ್ನು ಬುಧವಾರ ಸಂಜೆ ಜ್ವರ ಹಾಗೂ ನಿಶ್ಶಕ್ತಿಯ ಕಾರಣಕ್ಕೆ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್) ಗೆ ದಾಖಲಿಸಲಾಗಿತ್ತು.
"ಅವರಿಗೆ ಡೆಂಗಿ ಇರುವುದು ಪತ್ತೆಯಾಗಿದೆ. ಆದರೆ ಅವರ ಪ್ಲೇಟ್ಲೆಟ್ ಎಣಿಕೆ ಈಗ ಹೆಚ್ಚಾಗುತ್ತಿದೆ ಹಾಗೂ ಅವರ ಸ್ಥಿತಿ ಸುಧಾರಿಸುತ್ತಿದೆ" ಎಂದು ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ.
ಸಿಂಗ್ ಅವರನ್ನು ಆಸ್ಪತ್ರೆಯ ಕಾರ್ಡಿಯೋ-ನ್ಯೂರೋ ಸೆಂಟರ್‌ನಲ್ಲಿರುವ ಖಾಸಗಿ ವಾರ್ಡ್‌ಗೆ ದಾಖಲಿಸಲಾಗಿದೆ ಹಾಗೂ ಡಾ.ನಿತೀಶ್ ನಾಯಕ್ ನೇತೃತ್ವದ ಹೃದ್ರೋಗ ತಜ್ಞರ ತಂಡ ಅವರನ್ನು ನೋಡಿಕೊಳ್ಳುತ್ತಿದೆ.
Next Story