Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಕರ್ನಾಟಕ
  4. ಹವಾಮಾನ ವೈಫರೀತ್ಯಕ್ಕೆ ಕಾಫಿ ಬೆಳೆಗಾರರು...

ಹವಾಮಾನ ವೈಫರೀತ್ಯಕ್ಕೆ ಕಾಫಿ ಬೆಳೆಗಾರರು ಮತ್ತೆ ಕಂಗಾಲು

ಅವಧಿಗೂ ಮುನ್ನ ಹಣ್ಣಾದ ಕಾಫಿ, ಕಟಾವಿ ಕಾರ್ಮಿಕರ ಕೊರತೆ, ಸಂಸ್ಕರಣೆಗೆ ಮಳೆ ಅಡ್ಡಿ ► ಕೇಂದ್ರ, ರಾಜ್ಯ ಸರಕಾರಗಳ ನೆರವಿನ ನಿರೀಕ್ಷೆಯಲ್ಲಿ ಸಣ್ಣ, ಮಧ್ಯಮವರ್ಗದ ಬೆಳೆಗಾರರು

ವಾರ್ತಾಭಾರತಿವಾರ್ತಾಭಾರತಿ16 Oct 2021 9:24 PM IST
share
ಹವಾಮಾನ ವೈಫರೀತ್ಯಕ್ಕೆ ಕಾಫಿ ಬೆಳೆಗಾರರು ಮತ್ತೆ ಕಂಗಾಲು

ಚಿಕ್ಕಮಗಳೂರು, ಅ.16: ಹವಾಮಾನ ವೈಫರೀತ್ಯ ಪರಿಣಾಮ ಜಿಲ್ಲೆಯ ಮಲೆನಾಡು ಭಾಗದಲ್ಲಿ ಕಳೆದ ಕೆಲ ವರ್ಷಗಳಿಂದ ಸಂಭವಿಸಿದ ಅತಿವೃಷ್ಟಿ ಹಾಗೂ ಅಕಾಲಿಮ ಮಳೆಯಿಂದಾಗಿ ಕಾಫಿ ಬೆಳೆ ಸಂಪೂರ್ಣವಾಗಿ ನೆಲಕಚ್ಚಿದ್ದು, ಇದು ಕಾಫಿ ಬೆಳೆಗಾರರನ್ನು ತೀವ್ರ ಆರ್ಥಿಕ ಸಂಕಷ್ಟಕ್ಕೆ ದೂಡಿದೆ. ಪರಿಣಾಮ ಕಾಫಿ ಬೆಳೆಗಾರರು ಕಾಫಿ ಉದ್ಯಮದ ಉಳಿವಿಗೆ ಕೇಂದ್ರದ ಪರಿಹಾರದ ಪ್ಯಾಕೆಜ್‍ಗೆ ಆಗ್ರಹಿಸುತ್ತಿದ್ದಾರೆ. ಆದರೆ ಕೇಂದ್ರದಿಂದ ಇದುವರೆಗೂ ಸಹಾಯಹಸ್ತ ಮರೀಚಿಕೆಯಾಗಿದೆ. ಈ ಮಧ್ಯೆ ಈ ಬಾರಿಯೂ ಅಕಾಲಿಕ ಮಳೆಯಿಂದಾಗಿ ಕಾಫಿ ಬೆಳೆ ಮತ್ತೆ ನೆಲಕಚ್ಚುತ್ತಿದ್ದು, ಬೆಳೆಗಾರರ ಬುದುಕು ಬೆಂಕಿಯಿಂದ ಬಾಣಲೆಗೆ ಬಿದ್ದಂತಾಗಿದೆ.

ಚಿಕ್ಕಮಗಳೂರು ಜಿಲ್ಲೆ ಕಾಫಿ ಬೆಳೆಗ ಹೆಸರಾದ ಜಿಲ್ಲೆಯಾಗಿದ್ದು, ಕಾಫಿನಾಡೆಂದೇ ಹೆಸರಾಗಿದೆ. ಕಾಫಿ ಉದ್ಯಮ ದೇಶಕ್ಕೆ ಅಪಾರ ವಿದೇಶಿ ವಿನಿಮಯ ತಂದು ಕೊಡುವ ಉದ್ಯಮವಾಗಿದ್ದು, ಲಕ್ಷಾಂತರ ಕಾರ್ಮಿಕರಿಗೆ ಉದ್ಯೋಗ ನೀಡಿರುವುದಲ್ಲದೇ ಈ ಉದ್ಯಮ ಪತ್ಯಕ್ಷ, ಪರೋಕ್ಷವಾಗಿ ಲಕ್ಷಾಂತರ ಜನರಿಗೆ ಬದುಕು ನೀಡಿದೆ. ಇಂತಹ ಉದ್ಯಮಕ್ಕೆ ಹವಾಮಾನ ವೈಪರೀತ್ಯ ಎಂಬುದು ಇತ್ತೀಚಿನ ಕೆಲ ವರ್ಷಗಳಿಂದ ಬೆಂಬಿಡದೇ ಕಾಡುತ್ತಿದೆ.

ಕಾಫಿನಾಡಿನ ಜನರು ಕಳೆದ ಮೂರು ವರ್ಷಗಳಿಂದ ಅತಿವೃಷ್ಟಿ, ಅಕಾಲಿಕ ಮಳೆಯಿಂದ ತತ್ತರಿಸಿ ಹೋಗಿದ್ದಾರೆ. ಅತಿವೃಷ್ಟಿಯಿಂದಾಗಿ ಮಲೆನಾಡಿನ ಪ್ರಮುಖ ವಾಣಿಜ್ಯ ಬೆಳೆಗಳಾದ ಅಡಿಕೆ, ಕಾಳುಮೆಣಸು ಬೆಳೆಗಳ ಪೈಕಿ ಕಾಫಿ ಬೆಳೆಗೆ ಅಪಾರ ನಷ್ಟವನ್ನುಂಟು ಮಾಡಿದೆ. ಸತತ ಮೂರು ವರ್ಷಗಳಿಂದ ಕಾಫಿ ಬೆಳೆಗಾರರು ತಮ್ಮ ಕಾಫಿ ತೋಟಗಳಲ್ಲಿ ಬೆಳೆದ ಬೆಳೆ ಕೈ ಸೇರದೇ ಮಣ್ಣು ಪಾಲಾಗುತ್ತಿದೆ. ಭಾರೀ ಮಳೆಗೆ ಕಟಾವಿಗೆ ಬಂದ ಕಾಫಿ ಬೆಳೆ ಕೊಯ್ಲು ಮಾಡಲಾಗದ ಸ್ಥಿತಿ ನಿರ್ಮಾಣವಾಗಿ ಸಂಪೂರ್ಣ ಬೆಳೆ ಉದುರಿಹೋಗಿದೆ. ಅಳಿದುಳಿದ ಬೆಳೆ ಕಟಾವು ಮಾಡಿದ್ದ ಬೆಳೆಗಾರರು ಸಂಸ್ಕರಣ ಮಾಡಿ ಸಿಕ್ಕಷ್ಟು ಬೆಲೆ ಮಾರಲು ಮುಂದಾಗಿದ್ದ ವೇಳೆ ದಿಢೀರ್ ಸುರಿದ ಅಕಾಲಿಕ ಮಳೆಯ ನೀರು ಕಣದಲ್ಲಿ ಒಣಗಲು ಹಾಕಿದ್ದ ಕಾಫಿಯನ್ನು ಕೊಚ್ಚಿಕೊಂಡು ಮಣ್ಣು ಪಾಲಾಗುವಂತೆ ಮಾಡಿದೆ.

ಜಿಲ್ಲೆಯಲ್ಲಿ ಅಂದಾಜು 1 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಅರೇಬಿಕಾ, ರೊಬಾಸ್ಟಾ ಕಾಫಿಯನ್ನು ಬೆಳೆಯಲಾಗುತ್ತಿದೆ. ಇಲ್ಲಿ ಬೆಳೆದ ಕಾಫಿಯ ಪೈಕಿ ಬಹುತೇಕ ಕಾಫಿ ವಿದೇಶಕ್ಕೆ ರಫ್ತಾಗುತ್ತದೆ. ಆದರೆ ಸತತ ಮೂರು ವರ್ಷಗಳಿಂದ ಸಂಭವಿಸಿದ ಅತಿವೃಷ್ಟಿ ಹಾಗೂ ಅಕಾಲಿಕ ಮಳೆಯಿಂದಾಗಿ ಸದ್ಯ ಕಾಫಿ ತೋಟಗಳಲ್ಲಿ ಶೀತದ ವಾತಾವರಣ ಹೆಚ್ಚಾಗಿ ಫಸಲು ಕಡಿಮೆಯಾಗುವಂತಾಗಿದೆ. ಕಾಫಿ ಗಿಡಗಳು ವಿವಿಧ ಕೀಟ ಬಾಧೆಯಿಂದ ಒಣಗಲಾರಂಭಿಸಿವೆ. ರಾಸಾಯನಿಕ ಗೊಬ್ಬರ, ಕೀಟನಾಶಕಗಳ ಬೆಳೆ ಹೆಚ್ಚಾಗಿರುವುದು ಹಾಗೂ ಕಾರ್ಮಿಕರ ಕೊರತೆಯಿಂದಾಗಿ ಕಾಫಿ ತೋಟಗಳ ನಿರ್ವಹಣೆ ಮಾಡಲಾಗುತ್ತಿಲ್ಲ. ಈ ನಡುವೆ ಕಾಫಿ ಕೃಷಿಗೆ ಪಡೆದ ಸಾಲ ಮರುಪಾವತಿ ಮಾಡಲಾಗದೇ ಕಾಫಿ ಬೆಳೆಗಾರರು ತೋಟಗಳನ್ನೇ ಮಾರಾಟ ಮಾಡುವ ಸ್ಥಿತಿಗೆ ಬಂದಿದ್ದಾರೆ.

ಇಂತಹ ಪರಿಸ್ಥಿತಿಯಲ್ಲಿರುವ ಕಾಫಿ ಬೆಳೆಗಾರರು ಈ ಬಾರಿಯಾದರೂ ಕಾಫಿ ಬೆಳೆ ಕೈಹಿಡಿಯಬಹುದೇನೋ ಎಂಬ ನಿರೀಕ್ಷೆಯಲ್ಲಿದ್ದರು. ಆದರೆ ಈ ಬಾರಿಯೂ ಮಳೆ ಕಾಫಿ ಬೆಳೆಗಾರರಿಗೆ ಅಘಾತ ನೀಡಿದೆ. ಈ ಬಾರಿಯ ಮಳೆಗಾದಲ್ಲಿ ಆರ್ಭಟಿಸಿದ್ದ ಮಳೆ ತೋಟಗಳ ಶೀತ ವಾತಾವರಣವನ್ನು ಮತ್ತಷ್ಟು ಹೆಚ್ಚಿಸಿರುವುದರಿಂದ ಕಾಫಿ ಗಿಡಗಳಲ್ಲಿ ಸರಿಯಾಗಿ ಹೂ ಕಟ್ಟಲೂ ಬಿಟ್ಟಿಲ್ಲ. ಸದ್ಯ ಸುರಿಯುತ್ತಿರುವ ಸುರಿದ ಅಕಾಲಿಕ ಮಳೆ ಅಳಿದುಳಿದ ಕಾಫಿ ಬೆಳೆಯನ್ನೂ ಮಣ್ಣು ಪಾಲು ಮಾಡುತ್ತಿದೆ. ಸದ್ಯ ಜಿಲ್ಲೆಯ ಚಿಕ್ಕಮಗಳೂರು, ಮೂಡಿಗೆರೆ ತಾಲೂಕು ವ್ಯಾಪ್ತಿಯಲ್ಲಿರುವ ಅರೇಬಿಕಾ ತೋಟಗಳಲ್ಲಿ ಕಾಫಿ ಹಣ್ಣಾಗಿದ್ದು, ಮಳೆಯಿಂದಾಗಿ ಕಾಫಿ ಕಟಾವು ಮಾಡಲಾಗುತ್ತಿಲ್ಲ. ಮೋಡಕವಿದ ವಾತಾವರಣ ಹಾಗೂ ಮಳೆಯಿಂದಾಗಿ ಕಟಾವು ಮಾಡಿದ ಕಾಫಿಯನ್ನು ಒಣಗಿಸಲೂ ಸಾಧ್ಯವಾಗದೇ ಬೆಳೆಗಾರರು ತಲೆ ಮೇಲೆ ಕೈಹೊತ್ತು ಕೂರುವಂತಾಗಿದೆ.

ಜಿಲ್ಲೆಯ ಕೆಲ ಭಾಗದಲ್ಲಿ ಹವಾಮಾನ ವೈಪರೀತ್ಯದ ಪರಿಣಾಮ ಅವಧಿಗೂ ಮುನ್ನ ಕಾಫಿ ಹಣ್ಣಾಗಿ ಮಳೆಯಿಂದ ನೆಲಕಚ್ಚುತ್ತಿರುವುದರಿಂದ ಸುರಿಯೋ ಮಳೆಯಲ್ಲೇ ಕಾಫಿಯನ್ನು ಕಟಾವು ಮಾಡಲೇಬೇಕಾಗಿದೆ. ಹಲವೆಡೆ ಸುರಿಯೋ ಮಳೆಯಲ್ಲೇ ಕಾಫಿಯನ್ನು ಕಟಾವು ಮಾಡಲಾಗುತ್ತಿದ್ದರೇ, ಕೆಲವೆಡೆ ಹೊರ ರಾಜ್ಯಗಳ ಕಾರ್ಮಿಕರು ಈ ಬಾರಿ ಜಿಲ್ಲೆಯತ್ತ ಇನ್ನೂ ತಲೆ ಹಾಕದ ಪರಿಣಾಮ ಕಾರ್ಮಿಕರ ಕೊರತೆ ಉಂಟಾಗಿ ಕಾಫಿಯನ್ನು ಕಟಾವು ಮಾಡಲಾಗದೇ ಕೈಚೆಲ್ಲುವಂತಾಗಿದೆ. ಕಟಾವು ಮಾಡಿದ ಕಾಫಿ ಹಣ್ಣನ್ನು ಕೂಡಲೇ ಬಿಸಲಿನಲ್ಲಿ ಒಣಗಿಸಬೇಕು. ತಪ್ಪಿದಲ್ಲಿ ಕಾಫಿ ಹಣ್ಣು ಕೊಳೆಯಲಾರಂಭಿಸಿ ಗುಣಮಟ್ಟದ ಕಾಫಿ ಉತ್ಪಾದನೆ ಸಾಧ್ಯವಿಲ್ಲ. ಗುಣಮಟ್ಟ ಇಲ್ಲದ ಕಾಫಿಗೆ ಬೆಲೆಯೂ ಇರಲ್ಲ. ಆದರೆ ಮಲೆನಾಡಿನಲ್ಲಿ ಸದ್ಯ ಮಳೆಯಾಗುತ್ತಿರುವುದರಿಂದ ಹಾಗೂ ಬಿಸಿಲು ಕಣ್ಮರೆಯಾಗಿರುವುದರಿಂದ ಕಾಫಿ ಕಟಾವು ಮಾಡಲಾಗದಂತಹ ಸ್ಥಿತಿ ನಿರ್ಮಾಣವಾಗಿದೆ. ಕಟಾವು ಮಾಡದೇ ಬಿಟ್ಟ ಕಾಫಿ ಇಡೀ ತೋಟದಾದ್ಯಂತ ಹರಡಿಕೊಂಡು ಮೊಳಕೆ ಒಡೆಯುತ್ತಿವೆ. ಕಳೆದ ಮೂರು ವರ್ಷಗಳಿಂದ ಕಾಫಿ ಬೆಳೆ ಬೆಳೆಗಾರರ ಗೋಡನ್ ಸೇರಿದ್ದಕ್ಕಿಂತ ಮಣ್ಣು ಪಾಲಾಗಿರುವುದೇ ಹೆಚ್ಚು ಎಂಬುದು ಬೆಳೆಗಾರರ ಅಳಲಾಗಿದೆ.

ಒಂದೆಡೆ ಕಾರ್ಮಿಕರ ಕೊರತೆ, ಮತ್ತೊಂದೆಡೆ ಕಟಾವು ಮಾಡಿದ ಕಾಫಿಯನ್ನು ಒಣಗಿಸಲಾಗದ ಸ್ಥಿತಿಯಲ್ಲಿ ಕಾಫಿ ಬೆಳೆಗಾರರು ಪಡಿಪಾಟಲು ಅನುಭವಿಸುತ್ತಿದ್ದಾರೆ. ಕಾಫಿಯನ್ನು ಉಳಿಸಿಕೊಳ್ಳದಿದ್ದಲ್ಲಿ ಕಾರ್ಮಿಕರ ಕೂಲಿ ಸೇರಿದಂತೆ ತೋಟಗಳ ನಿರ್ವಹಣೆ ಮಾಡಲಾಗದೇ ಪಾಳು ಬಿಡುವ ಪರಿಸ್ಥಿತಿಯೊಂದಿಗೆ ಸಾಲ ಮರುಪಾವತಿ ಮಾಡಲಾಗದೇ ಬ್ಯಾಂಕ್‍ನವರ ಕಾಟ ಹೆಚ್ಚುವ ಆತಂಕ ಬೆಳೆಗಾರರದ್ದಾಗಿದೆ. 

ಈ ಬಾರಿ ಕಾಫಿನಾಡಿನಲ್ಲಿ ಮುಂಗಾರು ಆಶಾದಾಯಕವಾಗಿತ್ತು. ಸಕಾಲದಲ್ಲಿ ಮಳೆಯಾಗಿ ಉತ್ತಮ ಕಾಫಿ ಫಸಲು ಸಿಗುವ ನಿರೀಕ್ಷೆಯಲ್ಲಿ ಬೆಳೆಗಾರರಿದ್ದರು. ಆದರೆ ಕೆಲ ತಿಂಗಳುಗಳಲ್ಲಿ  ಹವಾಮಾನ ವೈಪರೀತ್ಯದ ಪರಿಣಾಮ ಅಕಾಲಿಕ ಮಳೆಯ ಮೇಲಾಟಕ್ಕೆ ಬೆಳೆಗಾರರ ನಿರೀಕ್ಷೆಗಳು ಹುಸಿಯಾಗಿದ್ದಾರೆ. ಪ್ರಕೃತಿಯ ಕಣ್ಣಾಮುಚ್ಚಾಲೆಯ ಆಟದ ಎದುರು ಕಂಗಾಲಾಗಿರುವ ಕಾಫಿ ಬೆಳೆಗಾರರು ಕಾರ್ಮಿಕರ ಕೊರತೆ, ಬೆಲೆ ಏರಿಕೆ ಹಾಗೂ ಸರಕಾರದ ದಿವ್ಯ ನಿರ್ಲಕ್ಷ್ಯದಿಂದಾಗಿ ಬಸವಳಿದು ಹೋಗಿದ್ದು, ಇನ್ನಾದರೂ ಕೇಂದ್ರ, ರಾಜ್ಯ ಸರಕಾರಗಳು ಕಾಫಿ ಬೆಳೆಗಾರರ ನೆರವಿಗೆ ಬಾರದಿದ್ದಲ್ಲಿ ಜಿಲ್ಲೆಯ ಕಾಫಿ ಉದ್ಯಮ ವಿನಾಶದ ಅಂಚಿಗೆ ತಲುಪುವುದರಲ್ಲಿ ಅನುಮಾನವೇ ಇಲ್ಲ.

ಇತ್ತೀಚಿನ ದಿನಗಳಲ್ಲಿ ಹವಾಮಾನದಲ್ಲಿನ ಏರುಪೇರು ಕಾಫಿ ಕೃಷಿಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. 2015ರಿಂದ ನಿರಂತರವಾಗಿ ಅತೀವೃಷ್ಟಿಯಾಗಿದ್ದು, ಕಾಫಿಬೆಳೆಗಾರರನ್ನು ಆರ್ಥಿಕ ಸಂಕಷ್ಟಕ್ಕೆ ಗುರಿಮಾಡಿದೆ. ರೋಗಭಾದೆ, ಬೆಲೆಕುಸಿತ, ಕಾರ್ಮಿಕರ ಕೊರತೆ, ಕಾಡುಪ್ರಾಣಿಗಳ ಹಾವಳಿಯ ಜೊತೆಗೆ ಹವಾಮಾನದ ವೈಪರೀತ್ಯವು ಬೆಳೆಗಾರರಿಗೆ ಕಷ್ಟವಾಗಿ ಪರಿಣಮಿಸಿದೆ. ಸರಕಾರ ಬೆಳೆಗಾರರ ನೆಲವಿಗೆ ಬರುತ್ತಿಲ್ಲ. ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಲ್ಲಿ ಎಲ್ಲಾ ಬೆಳೆಗಾರರಿಗೆ ಬೆಳೆವಿಮೆ ಹಣ ಬಂದಿಲ್ಲ. ಅಕಾಲಿಕ ಮಳೆಯಿಂದ  ಕಾಫಿ ಒಣಗಿಸಲು ಸಾಧ್ಯವಾಗದೇ ಕಾಫಿಯ ಗುಣಮಟ್ಟ ಕಳೆದುಕೊಳ್ಳುತ್ತಿದೆ. ಇದರಿಂದ ಕಾಫಿಯನ್ನು ರಫ್ತುಮಾಡಲು ತೊಂದರೆಯಾಗುತ್ತಿದೆ.  ಕೇಂದ್ರ ಸರಕಾರ ಮಧ್ಯಪ್ರವೇಶಿಸಿ ಈ ಬಾರಿಯ ಬಜೆಟ್‍ನಲ್ಲಿ ಶೇ.80ರ ಸಹಾಯಧನಗಳನ್ನು ಡ್ರೈಯರ್ ಹಾಗೂ ಪಾಲಿಹೌಸ್‍ಗಳಿಗೆ ತಕ್ಷಣವೇ ನೀಡಬೇಕು. ಇದರಿಂದ ಬೆಳೆದ ಬೆಳೆಯ ಗುಣಮಟ್ಟವನ್ನು ಕಾಪಾಡಿಕೊಂಡು, ಕಾಫಿ ರಫ್ತು ಮಾಡಲು ಅನುಕೂಲವಾಗಲಿದೆ. ಪ್ರಧಾನ ಮಂತ್ರಿ ಫಸಲ್‍ಭಿಮಾ ಯೋಜನೆಯನ್ನು ಹಿಂಗಾರು ಮಳೆಗೂ ಅನ್ವಯವಾಗುವಂತೆ ಮಾಡಬೇಕು.

- ಬಿ.ಎಸ್.ಜಯರಾಮ್, ಮಾಜಿ ಅಧ್ಯಕ್ಷ, ಕಾಫಿ ಬೆಳೆಗಾರರ ಒಕ್ಕೂಟ

share
ವಾರ್ತಾಭಾರತಿ
ವಾರ್ತಾಭಾರತಿ
Next Story
X