ವ್ಯಾಟಿಕನ್ ಸಿಟಿ; ಸಿನೊಡಾಲಿಟಿ- ಕಮ್ಯುನಿಯನ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಜೆಸ್ವಿತಾ ಪ್ರಿನ್ಸಿ ಕ್ವಾಡ್ರಾಸ್

ಮಂಗಳೂರಿನ ಏಂಜೆಲೋರ್ ಪ್ಯಾರಿಷ್‍ನ 22 ವರ್ಷದ ಜೆಸ್ವಿತಾ ಪ್ರಿನ್ಸಿ ಕ್ವಾಡ್ರಾಸ್ ವ್ಯಾಟಿಕನ್ ಸಿಟಿ ಯಲ್ಲಿ ಅ. 9-10ರಂದು ನಡೆದ ಸಿನೊಡಾಲಿಟಿ- ಕಮ್ಯುನಿಯನ್ ನಲ್ಲಿ ಭಾಗವಹಿಸಿದ್ದರು.
ಪೋಪ್ ಫ್ರಾನ್ಸಿಸ್ ಸಿನೊಡ್ ಅನ್ನು ಉದ್ಘಾಟಿಸಿದರು. ಇದು ಅಂತರರಾಷ್ಟ್ರೀಯ ಯುವ ಸಲಹಾ ಸಂಸ್ಥೆಯ ಮೊದಲ ಆಫ್ ಲೈನ್ ಸಭೆಯಾಗಿತ್ತು.
ಜೆಸ್ವಿತಾ ಅವರು ವಿನ್ಸೆಂಟ್ ಮತ್ತು ಶಾರ್ಲೆಟ್ ಕ್ವಾಡ್ರಾಸ್ ಅವರ ಪುತ್ರಿ ಮತ್ತು ಏಷ್ಯಾದ ಮೂವರು ಪ್ರತಿನಿಧಿಗಳಲ್ಲಿ ಒಬ್ಬರು ಹಾಗೂ ಭಾರತದ ಏಕೈಕ ಪ್ರತಿನಿಧಿಯಾಗಿದ್ದರು.
ಜೆಸ್ವಿತಾ 2016-19ರವರೆಗೆ ವೈಸಿಎಸ್ ವೈಎಸ್‍ಎಮ್‍ನ ರಾಷ್ಟ್ರೀಯ ಅಧ್ಯಕ್ಷರಾಗಿದ್ದರು ಮತ್ತು 2019 ರಿಂದ ಅಂತರರಾಷ್ಟ್ರೀಯ ಯುವ ಸಲಹಾ ಸಂಸ್ಥೆಯ ಸದಸ್ಯರಾಗಿದ್ದಾರೆ. ವಿವಿಧ ದೇಶಗಳ 20 ಮಂದಿ ಅಂತಾರಾಷ್ಟ್ರೀಯ ಯುವ ಸಲಹಾ ಸಂಸ್ಥೆಯ ಭಾಗವಾಗಿದ್ದಾರೆ
Next Story





