ಉಡುಪಿ: ಬುದ್ಧ ವಂದನೆ ಸಮಾರಂಭಲ್ಲಿ ನೂರಾರು ಮಂದಿಗೆ ಬೌದ್ಧ ದೀಕ್ಷೆ

ಉಡುಪಿ, ಅ.17: ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಉಡುಪಿ ಜಿಲ್ಲಾ ಸಮಿತಿ, ಬೌದ್ಧ ಮಹಾಸಭಾ ಮತ್ತು ಬುದ್ಧಿಸ್ಟ್ ಸೊಸೈಟಿ ಆಫ್ ಇಂಡಿಯಾ ಇವುಗಳ ಸಹಯೋಗದಲ್ಲಿ ಉಡುಪಿ ಜಿಲ್ಲಾ ಅಂಬೇಡ್ಕರ್ ಭವನದಲ್ಲಿ ಅ.14ರಂದು ಆಯೋಜಿಸಲಾದ ಬುದ್ಧ ವಂದನೆ ಮತ್ತು ಬೌದ್ಧ ಧಮ್ಮ ದೀಕ್ಷಾ ಸಮಾರಂಭದಲ್ಲಿ ಬೆಂಗಳೂರು ಮಹಾಬೋಧಿ ಸೊಸೈಟಿಯ ಬಂತೇಜಿ ಬೋಧ ಚಿತ್ರ ಮತ್ತು ಭಂತೇಜಿ ಜ್ಞಾನರತ್ನ ನೂರಾರು ಮಂದಿಗೆ ಬೌದ್ಧದೀಕ್ಷೆ ನೀಡಿದರು.
ಜಾತಿ ಅಸಮಾನತೆ ಮತ್ತು ಜಾತಿ ದೌರ್ಜನ್ಯವನ್ನು ಪ್ರಬಲವಾಗಿ ವಿರೋಧಿಸಿ, ಹಿಂದೂವಾಗಿ ಹುಟ್ಟಿ ಹಿಂದೂವಾಗಿ ಸಾಯಲಾರೆ ಎಂದು ಭಾರತದಲ್ಲಿ ಹುಟ್ಟಿ ಸಮಾನತೆ ಸ್ವಾತಂತ್ಯ ಸಹೋದರತೆಯ ಮಾನವೀಯ ಮೌಲ್ಯಗಳನ್ನು ಸಾರಿದ ಅಂಬೇಡ್ಕರ್ ಬೌದ್ಧ ಧರ್ಮವನ್ನು ನಾಗಪುರದ ಧೀಕ್ಷಾ ಭೂಮಿಯಲ್ಲಿ ಸ್ವೀಕರಿಸಿ 65 ವರ್ಷ ಸಂದ ಸವಿ ನೆನಪಿಗಾಗಿ ಈ ಕಾರ್ಯಕ್ರಮ ಆಯೋಜಿಸಲಾ ಗಿದೆ. ಉಡುಪಿಯ ಇತಿಹಾಸದಲ್ಲಿ 54 ಮಂದಿ ಬೌದ್ಧ ಭಿಕ್ಷುಗಳು ಬುದ್ದ ವಂದನ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದು ಇದೇ ಮೊದಲು.
ಅಧ್ಯಕ್ಷತೆಯನ್ನು ದಸಂಸ ಜಿಲ್ಲಾ ಸಂಚಾಲಕ ಸುಂದರ ಮಾಸ್ತರ, ಬೌದ್ಧ ಮಹಾಸಭಾದ ಉಪಾಸಕರುಗಳಾದ ಶಂಭು ಮಾಸ್ತರ್, ಮಂಜುನಾಥ್, ಲಕ್ಷ್ಮಣ ಮಂಗಳೂರು, ದಸಂಸ ಮುಖಂಡರಾದ ಶ್ಯಾಮರಾಜ ಬಿರ್ತಿ, ಎಸ್.ಎಸ್. ಪ್ರಸಾದ್, ಭಾಸ್ಕರ್ ಮಾಸ್ತರ್, ಆನಂದ ಬ್ರಹ್ಮವಾರ, ಶಂಕರದಾಸ್ ಚೆಂಡ್ಕಳ, ಪುಷ್ಪಕರ ಕೊರಂಗ್ರಪಾಡಿ, ರಮೇಶ ಸುಭಾಸನಗರ, ಮಂಜುನಾಥ ಬಾಳ್ಳುದ್ರು ರಾಜೇಂದ್ರನಾಥ, ರಾಘವ ಕೊಟ್ಯಾನ್, ಶ್ರೀ ಕುಂಜಿಬೆಟ್ಟು ಉಪಸ್ಥಿತರಿದ್ದರು.








