ಅನೈತಿಕ ಪೊಲೀಸ್ ಗಿರಿ; ಬೆಳಗಾವಿಯಲ್ಲಿ ಯುವಕ, ಯುವತಿಗೆ ಹಲ್ಲೆ ನಡೆಸಿದ ದುಷ್ಕರ್ಮಿಗಳ ತಂಡ

ಸಾಂದರ್ಭಿಕ ಚಿತ್ರ
ಬೆಳಗಾವಿ: ನಗರದ ಉದ್ಯಾನವನವೊಂದಕ್ಕೆ ಭೇಟಿ ನೀಡಿದ್ದ ಯುವಕ ಮತ್ತು ಇನ್ನೊಂದು ಧರ್ಮದ ಯುವತಿಗೆ ದುಷ್ಕರ್ಮಿಗಳ ತಂಡವೊಂದು ಹಲ್ಲೆ ನಡೆಸಿದ ಘಟನೆ ವರದಿಯಾಗಿದೆ.
ಪರಸ್ಪರ ಪರಿಚಯವಿದ್ದ ಯುವಕ ಮತ್ತು ಯುವತಿ ನಗರದ ಬಸ್ಸು ನಿಲ್ದಾಣದಿಂದ ಆಟೊ ರಿಕ್ಷಾದ ಮೂಲಕ ವಾಯು ವಿಹಾರಕ್ಕೆಂದು ರವಿವಾರ ಬೆಳಿಗ್ಗೆ (ಇಂದು) ಉದ್ಯಾನವನವೊಂದಕ್ಕೆ ತೆರಳಿದ್ದಾರೆ.
ಈ ವೇಳೆ ಯುವಕ ಮತ್ತು ಬುರ್ಖಾ ಧರಿಸಿದ್ದ ಯುವತಿಯನ್ನು ಅನ್ಯ ಧರ್ಮಕ್ಕೆ ಸೇರಿದವರೆಂದು ಗಮನಿಸಿದ ರಿಕ್ಷಾ ಚಾಲಕ ಇವರನ್ನು ನಿರ್ಜನ ಪ್ರದೇಶವೊಂದಕ್ಕೆ ಕರೆದೊಯ್ದು ತನ್ನ ಸ್ನೇಹಿತರನ್ನು ಕರೆಸಿಕೊಂಡಿದ್ದಾನೆ.
ಇನ್ನೊಂದು ಧರ್ಮದ ಯುವತಿ ಜೊತೆ ಗೆಳೆತನ ಬೆಳೆಸಿದ್ದಕ್ಕೆ ಯುವಕನಿಗೆ ನಿಂದಿಸಿದ ದುಷ್ಕರ್ಮಿಗಳ ತಂಡ ಯುವತಿಯನ್ನು ಎಳೆದಾಡಿ ಬೆದರಿಕೆ ಹಾಕಿದೆ ಎಂದು ತಿಳಿದು ಬಂದಿದೆ.
ಈ ಸಂಬಂಧ ಯುವಕ, ಯುವತಿ ಹಲ್ಲೆ ನಡೆಸಿದವರ ವಿರುದ್ಧ ನಗರದ ಮಾಲಾ ಮಾರುತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
Next Story





