12 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ

ಕುಂದಾಪುರ, ಅ.17: ಪ್ರಕರಣವೊಂದರಲ್ಲಿ 12 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಹಳೆ ಆರೋಪಿಯೊಬ್ಬರನ್ನು ಕುಂದಾಪುರ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.
ಕುಂದಾಪುರ ಗ್ರಾಮಾಂತರ ಠಾಣಾ ಪ್ರಕರಣವೊಂದಕ್ಕೆ ಸಂಬಂಧಿಸಿ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿ ಕಾರವಾರದ ಮುನೀರ್ ಶೇಕ್ ಎಂಬಾತನನ್ನು ಗೋವಾ ರಾಜ್ಯದ ವಾಸ್ಕೋ ಎಂಬಲ್ಲಿ ಬಂಧಿಸಲಾಗಿದೆ.
ಕುಂದಾಪುರ ಗ್ರಾಮಾಂತರ ಠಾಣಾ ಎಸ್ಸೈ ನಿರಂಜನ್ ಗೌಡರ ಉಸ್ತುವಾರಿ ಯಲ್ಲಿ ಎಎಸ್ಸೈ ವಿಶ್ವನಾಥ ಖಾರ್ವಿ, ಸಿಬ್ಬಂದಿ ಸತೀಶ್ ಅವರು ಎಸ್ಪಿ ಕಚೇರಿಯ ತಾಂತ್ರಿಕ ಸಿಬ್ಬಂದಿಗಳ ಹಾಗೂ ವಾಸ್ಕೋ ಪೊಲೀಸ್ ಠಾಣೆಯ ಸಿಬ್ಬಂದಿಗಳ ಸಹಕಾರದೊಂದಿಗೆ ಈ ಕಾರ್ಯಾಚರಣೆ ನಡೆಸಿದ್ದಾರೆ.
Next Story





