ಚಾಮರಾಜನಗರ; ಸ್ನೇಹಿತರ ಜೊತೆ ಈಜಲು ಹೋಗಿದ್ದ ಬಾಲಕ ನೀರು ಪಾಲು

ಚಾಮರಾಜನಗರ: ಗುಂಡ್ಲುಪೇಟೆ ತಾಲೂಕಿನ ಮಲ್ಲಯ್ಯನಪುರ ಗ್ರಾಮದ ಬಾಲಕನೊರ್ವ ಗೆಳೆಯರ ಜೊತೆ ಈಜಲು ಹೋಗಿ ನೀರು ಪಾಲಾಗಿರುವ ಘಟನೆ ಗ್ರಾಮದಲ್ಲಿರುವ ಹೊಲ್ಗೆರೇ ಎಂಬಲ್ಲಿ ನಡೆದಿದೆ.
ಗ್ರಾಮದ ಮಹದೇವೆಗೌಡ ಹಾಗೂ ತಾಯಮ್ಮ ಎಂಬುವವರ ಪುತ್ರ 15 ವರ್ಷದ ಕಿರಣ್ ಕುಮಾರ್ ಎಂಬ ವಿದ್ಯಾರ್ಥಿಯೇ ಮೃತಪಟ್ಟ ಬಾಲಕನಾಗಿದ್ದು, ತನ್ನ ಇಬ್ಪರು ಸ್ನೇಹಿತರ ಜೊತೆ ಕೆರೆಗೆ ಈಜಲು ತೆರಳಿದ್ದ ಎನ್ನಲಾಗಿದೆ.
ಮೖೆಸೂರಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಬಾಲಕ ಕಿರಣ್ ಕುಮಾರ್ ಕಾರ್ಯಕ್ರಮದ ನಿಮಿತ್ತ ಊರಿಗೆ ಬಂದಿದ್ದ. ಈ ವೇಳೆ ಸ್ನೇಹಿತರ ಜೊತೆಗೆ ಇಲ್ಲಿನ ಹೊಲ್ಗೆರೆಯ ಕೆರೆಗೆ ಈಜಲು ತೆರಳಿದ್ದು, ಕಿರಣ್ ಕುಮಾರ್ ನೀರುಪಾಲಾಗಿದ್ದಾನೆ.
ಜೊತೆಗಿದ್ದ ಇಬ್ಬರು ಸ್ನೇಹಿತರು ಸದ್ಯ ಪಾರಾಗಿದ್ದು, ಗ್ರಾಮಸ್ಥರ ಸಹಾಯದಿಂದ ಬಾಲಕನ ಮೃತ ದೇಹವನ್ನು ಮೇಲೆತ್ತಲಾಗಿದೆ. .
Next Story





