ಕೇಂದ್ರ ಸಚಿವ ಅಜಯ್ ಮಿಶ್ರಾ ವಜಾ,ಬಂಧನಕ್ಕೆ ಒತ್ತಾಯಿಸಿ ಕಿಸಾನ್ ಮೋರ್ಚಾದಿಂದ ನಾಳೆ 'ರೈಲ್ ರೋಕೋ'
ಲಖಿಂಪುರ ಖೇರಿ ಹಿಂಸಾಚಾರ

photo: ANI
ಹೊಸದಿಲ್ಲಿ: ಲಖಿಂಪುರ ಖೇರಿ ಹಿಂಸಾಚಾರ ಘಟನೆಗೆ ಸಂಬಂಧಿಸಿದಂತೆ ಕೇಂದ್ರ ಸಚಿವ ಅಜಯ್ ಮಿಶ್ರಾ ಅವರನ್ನು ವಜಾಗೊಳಿಸಲು ಹಾಗೂ ಬಂಧಿಸಲು ಒತ್ತಾಯಿಸಿ 'ರೈಲ್ ರೋಕೋ' ಪ್ರತಿಭಟನೆಗಳನ್ನು ಅಕ್ಟೋಬರ್ 18 ರಂದು ನಡೆಸಲಾಗುವುದು ಎಂದು ಸಂಯುಕ್ತ ಕಿಸಾನ್ ಮೋರ್ಚಾ (ಎಸ್ಕೆಎಂ) ರವಿವಾರ ಹೇಳಿದೆ.
ಕೇಂದ್ರದ ಮೂರು ಕೃಷಿ ಕಾನೂನುಗಳ ವಿರುದ್ಧ ರೈತರ ಆಂದೋಲನದ ನೇತೃತ್ವ ವಹಿಸಿರುವ ಎಸ್ ಕೆ ಎಂ, ಲಖಿಂಪುರ್ ಖೇರಿ ಪ್ರಕರಣದಲ್ಲಿ "ನ್ಯಾಯ ಸಿಗುವವರೆಗೂ ಪ್ರತಿಭಟನೆಗಳನ್ನು ತೀವ್ರಗೊಳಿಸಲಾಗುವುದು" ಎಂದು ಹೇಳಿದೆ.
ಎಸ್ ಕೆ ಎಂ 'ರೈಲು ರೋಕೋ' ಪ್ರತಿಭಟನೆಯ ಸಂದರ್ಭದಲ್ಲಿ ಸೋಮವಾರ ಬೆಳಿಗ್ಗೆ 10 ರಿಂದ ಸಂಜೆ 4 ರವರೆಗೆ ಎಲ್ಲಾ ರೈಲು ಸಂಚಾರವನ್ನು ಆರು ಗಂಟೆಗಳ ಕಾಲ ನಿಲ್ಲಿಸಲಾಗುತ್ತದೆ.
ಲಖಿಂಪುರ ಖೇರಿ ಹತ್ಯಾಕಾಂಡದಲ್ಲಿ ನ್ಯಾಯವನ್ನು ಖಾತ್ರಿಪಡಿಸಿಕೊಳ್ಳಲು ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ಅವರನ್ನು ವಜಾಗೊಳಿಸಲು ಮತ್ತು ಬಂಧಿಸುವ ಬೇಡಿಕೆಯೊಂದಿಗೆ ಸಂಯುಕ್ತ ಕಿಸಾನ್ ಮೋರ್ಚಾ ನಾಳೆ ರಾಷ್ಟ್ರವ್ಯಾಪಿ ರೈಲು ರೋಕೋ ಕಾರ್ಯಕ್ರಮವನ್ನು ಘೋಷಿಸಿದೆ.
Next Story