ಶಿವಮೊಗ್ಗ; ಪತ್ನಿಯನ್ನು ಕೊಲೆ ಮಾಡಿದ ಆರೋಪಿಯ ಬಂಧನ
ಶಿವಮೊಗ್ಗ, ಅ.17: ಗಾಡಿಕೊಪ್ಪ ಸಮೀಪ ಪತ್ನಿಯನ್ನು ಚಾಕುವಿನಿಂದ ಚುಚ್ಚಿ ಕೊಲೆ ಮಾಡಿದ ಪತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಆಯನೂರು ಗ್ರಾಮದ ನಿವಾಸಿ ಕೌಸರ್ ಫಿಜಾ(19) ಎಂಬುವವರನ್ನು ಆಕೆಯ ಪತಿ ಅಬ್ದುಲ್ ಶೋಯೇಬ್ ಶನಿವಾರ ಕೊಲೆ ಮಾಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಕೌಸರ್ ಫಿಜಾ ಅವರನ್ನು ಟಿಪ್ಪು ನಗರದ ನಿವಾಸಿ ಅಬ್ದುಲ್ ಶೋಯೇಬ್ ಎಂಬಾತನೊಂದಿಗೆ ಮದುವೆ ಮಾಡಿಸಿದ್ದು, ವ್ಯಾಪಾರಕ್ಕಾಗಿ ಗುಜುರಿ ಅಂಗಡಿಯನ್ನು ಹಾಕಿಕೊಟ್ಟಿದ್ದರು. ಆದರೆ, ಶೋಯೇಬ್ ಹಣವನ್ನು ಅನಗತ್ಯವಾಗಿ ಖರ್ಚು ಮಾಡುತ್ತಾರೆ ಎಂಬ ಕಾರಣಕ್ಕೆ ಪತಿ, ಪತ್ನಿಯ ನಡುವೆ ಜಗಳವಾಗುತಿತ್ತು.
ಹೆರಿಗೆ ನಂತರ ಕೌಸರ್ ಅವರನ್ನು ತವರು ಮನೆಗೆ ಕರೆದುಕೊಂಡು ಬರಲಾಗಿತ್ತು. ತನ್ನ ಮಗುವನ್ನು ಮನೆಗೆ ಕಳುಹಿಸುವಂತೆ ಶೋಯೇಬ್ ಜಗಳವಾಡಿದ್ದರಿಂದ ಹೆರಿಗೆಯಾದ 40 ದಿನಗಳಲ್ಲಿ ಕೌಸರ್ ರನ್ನು ಪತಿಯ ಮನೆಗೆ ಕಳುಹಿಸಲಾಗಿತ್ತು. ಅದಾದ ಮೂರು ದಿನಗಳಲ್ಲಿಯೇ ವಾಪಸ್ ಕಳುಹಿಸಲಾಗಿದೆ.
ಶನಿವಾರ ತವರು ಮನೆಯಲ್ಲಿದ್ದ ಕೌಸರ್ ಅವರಿಗೆ ಫೋನ್ ಮಾಡಿದ ಶೋಯೇಬ್ ಬಾಡಿಗೆಗೆ ಕೊಂಡಿಕೊಳ್ಳಲು ಉದ್ದೇಶಿಸಿರುವ ಮನೆ ನೋಡುವಂತೆ ತಿಳಿಸಿದ್ದಾನೆ. ಅದರಂತೆ, ಪತಿ ಹೇಳಿದ ಸ್ಥಳಕ್ಕೆ ಬಂದ ಪಯ್ನಿಯನ್ನು ಗಾಡಿಕೊಪ್ಪ ಸಮೀಪ ಕರೆದೊಯ್ದು ಚಾಕುವಿನಿಂದ ಚುಚ್ಚಿ, ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ್ದಾನೆ.
ಈ ಸಂಬಂಧ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.