ಟ್ವೆಂಟಿ-20 ವಿಶ್ವಕಪ್ ಜಯಿಸಲು ಭಾರತ ಕ್ರಿಕೆಟ್ ತಂಡ ಪ್ರಬುದ್ದತೆ ಪ್ರದರ್ಶಿಸಬೇಕು: ಗಂಗುಲಿ

ಹೊಸದಿಲ್ಲಿ, ಅ.17: ವಿರಾಟ್ ಕೊಹ್ಲಿ ನೇತೃತ್ವದ ಭಾರತದ ಕ್ರಿಕೆಟ್ ತಂಡವು ಟ್ವೆಂಟಿ-20 ವಿಶ್ವಕಪ್‌ನಲ್ಲಿ ಒಂದು ಪ್ರಬಲ ಸ್ಪರ್ಧಿಯಾಗಿ ಪರಿಗಣಿಸಲ್ಪಟ್ಟಿದೆ. ಟ್ರೋಫಿಯನ್ನು ತನ್ನದಾಗಿಸಿಕೊಳ್ಳಲು ಸ್ವಲ್ಪ ಪ್ರಬುದ್ಧತೆ ಪ್ರದರ್ಶಿಸಬೇಕಾದ ಅಗತ್ಯವಿದೆ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗುಲಿ ಹೇಳಿದ್ದಾರೆ. ನೀವು ಸುಲಭವಾಗಿ, ಟೂರ್ನಮೆಂಟ್‌ಗೆ ಕಾಲಿಟ್ಟ ತಕ್ಷಣವೇ ಚಾಂಪಿಯನ್ ಆಗಲು ಸಾಧ್ಯವಿಲ್ಲ. ತಂಡವು ಎಲ್ಲ ಪ್ರಕ್ರಿಯೆಯನ್ನು ಹಾದುಬರಬೇಕು. ಪ್ರಬುದ್ಧತೆಯನ್ನು ಪ್ರದರ್ಶಿಸಬೇಕು ಎಂದು ಪ್ರಶಸ್ತಿ ಗೆಲ್ಲಲು ಭಾರತವು ಏನು ಮಾಡಬೇಕಾದ ಅಗತ್ಯವಿದೆ ಎಂಬ ಪ್ರಶ್ನೆಗೆ ಗಂಗುಲಿ ಉತ್ತರಿಸಿದರು.
ನಮ್ಮ ಎಲ್ಲ ಆಟಗಾರರಲ್ಲಿ ಪ್ರತಿಭೆ ಇದೆ. ಎಲ್ಲರಲ್ಲೂ ರನ್ ಗಳಿಸುವ ಹಾಗೂ ವಿಕೆಟ್ ಪಡೆಯುವ ಕೌಶಲ್ಯವಿದೆ. ವಿಶ್ವಕಪ್ ಜಯಿಸಲು ಮಾನಸಿಕವಾಗಿ ಸದೃಢವಾಗಿರಬೇಕು. ಪ್ರತಿ ಪಂದ್ಯವನ್ನು ಗೆಲ್ಲುವತ್ತ ಚಿತ್ತ ಹರಿಸಬೇಕು. ಟೂರ್ನಿಯ ಆರಂಭದಲ್ಲೇ ಪ್ರಶಸ್ತಿ ಬಗ್ಗೆ ಯೋಚಿಸಬಾರದು ಎಂದು ಗಂಗುಲಿ ಹೇಳಿದರು.
Next Story