ಜಲಂಧರ್ ನಲ್ಲಿ ಯುವತಿಯರ ಮೇಲೆ ಹರಿದ ಪೊಲೀಸ್ ಇನ್ಸ್ಪೆಕ್ಟರ್ ಕಾರು: ಒಬ್ಬರು ಸಾವು

ಜಲಂಧರ್/ಹೊಸದಿಲ್ಲಿ, ಅ. 18: ರಸ್ತೆ ದಾಟಲು ನಿಂತಿದ್ದ ಇಬ್ಬರು ಯುವತಿಯರ ಮೇಲೆ ಕಾರು ಹರಿದ ಘಟನೆ ಪಂಜಾಬ್ನ ಜಲಂಧರ್ನಲ್ಲಿ ಸೋಮವಾರ ಬೆಳಗ್ಗೆ ಸಂಭವಿಸಿದೆ. ಈ ಘಟನೆಯಲ್ಲಿ ಓರ್ವ ಯುವತಿ ಮೃತಪಟ್ಟಿದ್ದರೆ, ಇನ್ನೋರ್ವ ಯುವತಿ ಗಂಭೀರ ಗಾಯಗೊಂಡಿದ್ದಾರೆ.
ಸಿಸಿಟಿವಿಯಲ್ಲಿ ದಾಖಲಾದ ದೃಶ್ಯಾವಳಿಯಲ್ಲಿ ಇಬ್ಬರು ಯುವತಿಯರು ರಸ್ತೆ ದಾಟಲು ರಸ್ತೆ ವಿಭಾಜಕದ ಮೇಲೆ ನಿಂತಿರುವುದು. ದಾಟಲು ಹೊರಟಾಗ ಅವರಿಗೆ ಬಿಳಿ ಮಾರುತಿ ಬ್ರೆಝಾ ಕಾರು ಢಿಕ್ಕಿ ಹೊಡೆಯುತ್ತಿರುವುದು ಕಂಡು ಬಂದಿದೆ.
ಮೃತಪಟ್ಟ ಯುವತಿಯನ್ನು ನವಜೋತ್ ಕೌರ್ ಎಂದು ಗುರುತಿಸಲಾಗಿದೆ. ಇವರು ಕಾರಿನ ಶೋರೂಂ ಒಂದರಲ್ಲಿ ಕೆಲಸ ಮಾಡುತ್ತಿದ್ದರು. ಗಾಯಗೊಂಡಿರುವ ಇನ್ನೋರ್ವ ಯುವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿ ಕಾರು ಚಲಾಯಿಸುತ್ತಿದ್ದ ಪೊಲೀಸ್ ಇನ್ಸ್ಪೆಕ್ಟರ್ ಅಮೃತ ಪಾಲ್ ಸಿಂಗ್ ಅವರನ್ನು ಬಂಧಿಸಲಾಗಿದೆ.
Next Story