ಬಾಂಬೆ ಲಕ್ಕಿ ರೆಸ್ಟೋರೆಂಟ್ ಮಾಲಕ ಸುಲೈಮಾನ್ ಹಾಜಿ ನಿಧನ

ಮಂಗಳೂರು, ಅ.18: ನಗರದ ಪ್ರಸಿದ್ಧ ಹೊಟೇಲ್‌ಗಳಲ್ಲಿ ಒಂದಾದ ಬಂದರ್ ನಲ್ಲಿರುವ ಬಾಂಬೆ ಲಕ್ಕಿ ರೆಸ್ಟೋರೆಂಟ್ ಮಾಲಕ ಎಂ. ಸುಲೈಮಾನ್ ಹಾಜಿ (84) ಸೋಮವಾರ ಸಂಜೆ ಸ್ವಗೃಹದಲ್ಲಿ ನಿಧನರಾದರು.
ಮೃತರು ಪತ್ನಿ, ಐವರು ಪುತ್ರರು ಮತ್ತು ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.
ಮೂಲತಃ ಕುದ್ರೋಳಿಯವರಾದ ಸುಲೈಮಾನ್ ಹಾಜಿ ಪ್ರಸ್ತುತ ಪಾಂಡೇಶ್ವರದಲ್ಲಿ ನೆಲೆಸಿದ್ದರು. ಕುದ್ರೋಳಿ ಜಾಮಿಯಾ ಮಸೀದಿಯ ಮಾಜಿ ಅಧ್ಯಕ್ಷರಾಗಿದ್ದ ಸುಲೈಮಾನ್ ಹಾಜಿ ಪ್ರಸ್ತುತ ಟ್ರಸ್ಟಿಯಾಗಿ ಸೇವೆ ಸಲ್ಲಿಸುತ್ತಿದ್ದರು.
ಸರಳ, ಸಜ್ಜನ ವ್ಯಕ್ತಿತ್ವದ ಸುಲೈಮಾನ್ ಅವರು ಶತಮಾನದ ಇತಿಹಾಸವಿರುವ ಬಾಂಬೆ ಹೋಟೆಲ್ ನ ಯಶಸ್ಸಿನ ರೂವಾರಿಯಾಗಿದ್ದಾರೆ.
Next Story





