ಬಾಂಗ್ಲಾದೇಶದಲ್ಲಿ 20 ಹಿಂದೂ ಧರ್ಮೀಯರ ಮನೆಗಳಿಗೆ ಬೆಂಕಿ: ವರದಿ

photo: AP
ಢಾಕಾ: ಕಳೆದ ವಾರ ದುರ್ಗಾ ಪೂಜೆಯ ಸಂದರ್ಭದಲ್ಲಿ ದೇವಾಲಯದ ಧ್ವಂಸ ಘಟನೆಗಳ ವಿರುದ್ಧ ಅಲ್ಪಸಂಖ್ಯಾತ ಸಮುದಾಯದ ಪ್ರತಿಭಟನೆಯ ನಡುವೆಯೇ ಬಾಂಗ್ಲಾದೇಶದಲ್ಲಿ ಹಿಂದೂಗಳ ಅರವತ್ತಾರು ಮನೆಗಳನ್ನು ಧ್ವಂಸ ಮಾಡಲಾಗಿದೆ ಹಾಗೂ ಕನಿಷ್ಠ 20 ಮನೆಗಳಿಗೆ ಬೆಂಕಿ ಹಚ್ಚಲಾಗಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.
ರಾಜಧಾನಿ ಢಾಕಾದಿಂದ ಸುಮಾರು 255 ಕಿ.ಮೀ. ದೂರದಲ್ಲಿರುವ ಹಳ್ಳಿಯಲ್ಲಿ ರವಿವಾರ ತಡರಾತ್ರಿ ಬೆಂಕಿ ಹಚ್ಚಲಾಗಿದೆ ಎಂದು bdnews24.com ವರದಿ ಮಾಡಿದೆ.
ಫೇಸ್ಬುಕ್ ಪೋಸ್ಟ್ನಲ್ಲಿ ಹಳ್ಳಿಯ ಹಿಂದೂ ಯುವಕನೊಬ್ಬ "ಧರ್ಮವನ್ನು ಅವಹೇಳನ ಮಾಡಿದ್ದಾನೆ" ಎಂಬ ವದಂತಿಯಿಂದ ಉದ್ವಿಗ್ನತೆ ಹೆಚ್ಚಾಗಿದ್ದು, ಪೊಲೀಸರು ಮೀನುಗಾರರ ಕಾಲೋನಿಗೆ ಧಾವಿಸಿದರು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊಹಮ್ಮದ್ ಹೇಳಿದ್ದಾರೆ.
ವ್ಯಕ್ತಿಯ ಮನೆಯ ಸುತ್ತಲೂ ಪೊಲೀಸರು ಕಾವಲು ಕಾಯುತ್ತಿದ್ದಂತೆ, ದಾಳಿಕೋರರು ಹತ್ತಿರದ ಇತರ ಮನೆಗಳಿಗೆ ಬೆಂಕಿ ಹಚ್ಚಿದರು ಎಂದು ವರದಿ ಹೇಳಿದೆ.
Next Story





