ದಿ ಭಾರತ್ ಅಕಾಡಮಿ ಶಾಲೆಗೆ ಕೇಂಬ್ರಿಡ್ಜ್ ಇಂಟರ್ ನ್ಯಾಷನಲ್ ಮಾನ್ಯತೆ

ಮಂಗಳೂರು, ಅ.18: ನಗರದ ಯೆಯ್ಯಡಿಯ ಬ್ಲೂ ಬೆರಿ ಹಿಲ್ಸ್‌ನಲ್ಲಿ ಜೂನ್ 2019ರಲ್ಲಿ ಆರಂಭಗೊಂಡ ದಿ ಭಾರತ್ ಅಕಾಡೆಮಿ (ಟಿಬಿಎ) ಶಾಲೆಗೆ ಪ್ರತಿಷ್ಠಿತ ಕೇಂಬ್ರಿಡ್ಜ್ ಇಂಟರ್‌ನ್ಯಾಷನಲ್ ಮಾನ್ಯತೆ ದೊರಕಿದೆ. ದಕ್ಷಿಣ ಕನ್ನಡ ಮತ್ತು ಉಡುಪಿ ವಲಯದಲ್ಲಿ ಕೇಂಬ್ರಿಜ್ ಈ ಮಾನ್ಯತೆ ಪಡೆದ ಪ್ರಥಮ ಶಾಲೆಯಾಗಿದೆ.
ಜಾಗತಿಕ ಬೆಳವಣಿಗೆಯ ಜೊತೆಗೆ, ಮುಂದುವರಿಯುವ ತಾಂತ್ರಿಕ ಅಂಶಗಳು ಹಾಗೂ ಪ್ರತಿಯೊಂದು ಮಕ್ಕಳ ವೈಯಕ್ತಿಕ ಅಭಿವೃದ್ಧಿಯನ್ನು ಬೆಳೆಸುವ ನಿಟ್ಟಿನಲ್ಲಿ ಈ ಶಾಲೆ ಅತಿ ಉನ್ನತ ಶಿಕ್ಷಣವನ್ನು ನೀಡುವಲ್ಲಿ ಯಶಸ್ವಿಯಾಗಿದೆ.
ವಿಶ್ವದ 160 ದೇಶಗಳಲ್ಲಿ 10,000 ಶಾಲೆಗಳಿಗೆ ಮಾತ್ರ ಕೇಂಬ್ರಿಡ್ಜ್ ಇಂಟರ್‌ನ್ಯಾಷನಲ್ ಮಾನ್ಯತೆ ದೊರಕಿದೆ. ಭಾರತದಲ್ಲಿ 400ರಷ್ಟು ಶಾಲೆಗಳಲ್ಲಿ ಮಾತ್ರ ಈ ಪಠ್ಯಕ್ರಮ ಅನುಸರಿಸಲಾಗುತ್ತದೆ. ದಿ ಭಾರತ್ ಅಕಾಡೆಮಿಯಲ್ಲಿ 1 ರಿಂದ 8 ನೇ ತರಗತಿಯವರೆಗೆ ಶಿಕ್ಷಣ ನೀಡಲಾಗುತ್ತದೆ. 2022-23 ಸಾಲಿನಿಂದ 9 ರಿಂದ 11 ನೇ ತರಗತಿಯವರೆಗೆ ಸೇರ್ಪಡೆಯಾಗಲಿದೆ.
ದಿ ಭಾರತ್ ಅಕಾಡೆಮಿ ಶಾಲೆಯ ವಠಾರದಲ್ಲಿ ಕೇಂಬ್ರಿಜ್ ಪಠ್ಯಕ್ರಮದ (ಐ.ಜಿ.ಸಿ.ಎಸ್.ಸಿ) ಪ್ರೌಡಶಾಲೆ ಹಾಗೂ ಪದವಿ ಪೂರ್ವ (ಎ.ಎಸ್ ಮತುತಿ ಎ ಲೆವೆಲ್) ವಿಭಾಗಗಳ ನೂತನ ಕಟ್ಟಡಕ್ಕೆ ಶಂಕುಸ್ಥಾಪನಾ ಕಾರ್ಯಕ್ರಮವು ಇಂದು ನಡೆಯಿತು. ದಿ ಭಾರತ್ ಅಕಾಡೆಮಿಯಲ್ಲಿ ಸುಸಜ್ಜಿತ ಫುಟ್‌ಬಾಲ್ ಕೋರ್ಟ್, ಸ್ಕೇಂಟಿಂಗ್ ರಿಂಕ್ ಮತ್ತು ಇತರ ಕ್ರೀಡಾ ಚಟುವಟಿಕೆಗಳು ಅತೀ ಶೀಘ್ರದಲ್ಲಿ ಪ್ರಾರಂಭಗೊಳ್ಳಲಿದೆ ಎಂದು ಶಾಲೆಯ ಪ್ರಕಟನೆ ತಿಳಿಸಿದೆ.
ದಿ ಭಾರತ್ ಅಕಾಡೆಮಿ ಶಾಲೆಯ ವಠಾರದಲ್ಲಿ ಕೇಂಬ್ರಿಡ್ಜ್ ಪಠ್ಯಕ್ರಮದ (ಐ.ಜಿ.ಸಿ.ಎಸ್.ಸಿ) ಪ್ರೌಡಶಾಲೆ ಹಾಗು ಪದವಿ ಪೂರ್ವ (ಎ.ಎಸ್ ಮತ್ತು ಎ ಲೆವೆಲ್) ವಿಭಾಗಗಳ ನೂತನ ಕಟಡಕ್ಕೆ ಶಂಕುಸ್ಥಾಪನೆಯನ್ನು ಭಾರತ್ ಸ್ಕೂಲ್ ಟ್ರಸ್ಟ್ ನ ಅಧ್ಯಕ್ಷ ಆನಂದ್ ಜಿ. ಪೈ ನೆರೆವೇರಿಸಿದರು.
ಪ್ರಾಂಶುಪಾಲರಾದ ಸುರೇಖಾ ಎಂ.ಎಚ್. ಅಂತಾರಾಷ್ಟ್ರೀಯ ಪಠ್ಯಕ್ರಮದ ಬಗ್ಗೆ ಒಳನೋಟ ನೀಡಿದರು. ಭಾರತ್ ಸ್ಕೂಲ್ ಟ್ರಸ್ಟ್‌ನ ಅಧ್ಯಕ್ಷರಾದ ಆನಂದ್ ಜಿ. ಪೈ ಅವರು ಕೇಂಬ್ರಿಡ್ಜ್ ಇಂಟರ್‌ನ್ಯಾಷನಲ್ ಅಫಿಲಿಯೇಶನ್ ಪ್ರಮಾಣ ಪತ್ರವನ್ನು ಪ್ರದರ್ಶಿಸಿದರು. ಇತರ ಟ್ಟಸ್ಟಿಗಳಾದ ಸುಧೀರ್ ಎಂ. ಪೈ, ಡಾ. ವಿಂಧ್ಯಾ ಆನಂದ ಪೈ ಮತ್ತು ಸುಮಾ ಅನಂತ್ ಪೈ, ಲೆಕ್ಕಪರಿಶೋಧಕ ಶಿವಾನಂದ ಪೈ, ಜಾನ್ಸನ್ ಟೆಲ್ಲಿಸ್, ಅಂಜನಾ ಕಾಮತ್ ಮತ್ತು ಶಾಲೆಯ ಸಿಬ್ಬಂದಿ ಉಪಸ್ಥಿತರಿದ್ದರು.







