ದೇಶದ ಸಾರ್ವಜನಿಕ ಆಸ್ತಿಗಳನ್ನು ಮಾರಾಟ ಮಾಡುತ್ತಿರುವ ಮೋದಿ ನೇತೃತ್ವದ ಸರಕಾರದಿಂದ ದೇಶಕ್ಕೆ ಅಪಾಯ: ಆರ್. ಜಯಾನಂದ
ಸಿ.ಪಿ.ಐ (ಎಂ) ಉಳ್ಳಾಲ ವಲಯ ಸಮ್ಮೇಳನ

ಮಂಗಳೂರು : ದೇಶದ ಸಾರ್ವಜನಿಕರ ಆಸ್ತಿಗಳನ್ನು ಖಾಸಗಿಯವರಿಗೆ ಮಾರಾಟ ಮಾಡುತ್ತಿರುವ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ದೇಶಕ್ಕೆ ಅಪಾಯಕಾರಿ ಸ್ಥಿತಿಯನ್ನು ತಂದೊಡ್ಡಿದೆ ಎಂದು ಸಿ.ಪಿ.ಐ.(ಎಂ) ಕಾಸರಗೋಡು ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಆರ್ ಜಯಾನಂದ ಟೀಕಿಸಿದ್ದಾರೆ.
ಅವರು ತೊಕ್ಕೊಟ್ಟಿನಲ್ಲಿ ನಡೆದ ಸಿ.ಪಿ.ಐ.(ಎಂ) ಉಳ್ಳಾಲ ವಲಯದ 23ನೇ ಸಮ್ಮೇಳನದ ಬಹಿರಂಗಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದರು.
ಭಾರತದ ರೈಲ್ವೆ, ವಿಮಾನ ನಿಲ್ದಾಣ, ಟೆಲಿಕಾಂ ವ್ಯವಸ್ಥೆ, ಬ್ಯಾಂಕ್‌ಗಳು ಹಾಗೂ ಪ್ರಮುಖವಾದ ಸರಕಾರದ ಸೊತ್ತುಗಳನ್ನು ಖಾಸಗಿಯವರಿಗೆ ಮಾರಾಟ ಮಾಡಿ, ಇನ್ನು ಭಾರತದ ನದಿಗಳನ್ನು, ಜನರನ್ನು ಮಾತ್ರ ಮಾರಾಟ ಮಾಡಲು ಬಾಕಿ ಉಳಿದಿದೆ ಎಂದು ಆರ್ ಜಯಾನಂದ ಟೀಕಿಸಿದರು.
ಕೇರಳದಲ್ಲಿ ಬಡ ಜನರಿಗೆ ಉಚಿತ ಆಹಾರ ಸಾಮಗ್ರಿಗಳನ್ನು ಬೇಕಾದಷ್ಟು ಕೊಡಲು ಸಿ.ಪಿ.ಐ.(ಎಂ) ಸರಕಾರಕ್ಕೆ ಸಾಧ್ಯವಾಗಿದೆ. ಇದು ಕರ್ನಾಟಕದಲ್ಲಿ ಏಕೆ ಸಾಧ್ಯವಿಲ್ಲ ಎಂದು ಬಿ.ಜೆ.ಪಿಯವರನ್ನು ಪ್ರಶ್ನಿಸಿದರು.
ಸಿಪಿಐ(ಎಂ) ಜಿಲ್ಲಾ ಕಾರ್ಯದರ್ಶಿ ವಸಂತ ಆಚಾರಿ ಮಾತನಾಡಿದರು.ತೊಕ್ಕೊಟ್ಟಿನಲ್ಲಿ ನಡೆದ ಬಹಿರಂಗ ಸಭೆಯ ಅಧ್ಯಕ್ಷತೆ ಯನ್ನು ಕೃಷ್ಣಪ್ಪ ಸಾಲ್ಯಾನ್ ವಹಿಸಿದ್ದರು. ಸಿಪಿಐ(ಎಂ) ಜಿಲ್ಲಾ ಸಮಿತಿ ಸದಸ್ಯರಾದ ಪದ್ಮಾವತಿ ಎಸ್. ಶೆಟ್ಟಿ, ವಾಸುದೇವ ಉಚ್ಚಿಲ್ ,ಸ್ವಾಗತ ಸಮಿತಿ ಅಧ್ಯಕ್ಷರಾದ ರಾಮಚಂದ್ರ ,ಕಾಂ. ಜಯಂತ ನಾಯಕ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಬೆಳಗ್ಗೆ ನಡೆದ ಅಧಿವೇಶನವನ್ನು ಸಿಪಿಐ(ಎಂ)ನ ಹಿರಿಯ ಸದಸ್ಯರಾದ ಗಂಗಾ ಧರ ಶೆಟ್ಟಿ ಧ್ವಜಾರೋಹಣ ಮಾಡುವ ಮೂಲಕ ಪ್ರಾರಂಭಗೊಂಡಿತ್ತು. ಸಮ್ಮೇಳ ನದಲ್ಲಿ ನೂತನ ಕಾರ್ಯದರ್ಶಿಯಾಗಿ ಜಯಂತ ನಾಯಕ್ ಅವರನ್ನು ಆಯ್ಕೆ ಮಾಡಲಾಯಿತು. ಸಂಜೆ ರ್ಯಾಲಿ ನಡೆಯಿತು. ಜಯಂತ ನಾಯಕ ಸ್ವಾಗತಿಸಿ, ಸಂಜೀವ ಪಿಲಾರು ವಂದಿಸಿದರು.








.jpeg)


