ಉಡುಪಿ: ಐಎಎಸ್/ಕೆಎಎಸ್ ಪರೀಕ್ಷೆಗೆ ಜಿಲ್ಲಾಡಳಿತದಿಂದ ಉಚಿತ ತರಬೇತಿ
ಉಡುಪಿ, ಅ.18:ಉಡುಪಿ ಜಿಲ್ಲಾಡಳಿತದ ವತಿಯಿಂದ, ಭಾರತೀಯ ನಾಗರೀಕ ಸೇವಾ ಪರೀಕ್ಷೆ (ಯುಪಿಎಸ್‌ಸಿ) ಮತ್ತು ಕರ್ನಾಟಕ ನಾಗರೀಕ ಸೇವಾ ಪರೀಕ್ಷೆ (ಕೆಪಿಎಸ್‌ಸಿ) ಸ್ಪರ್ಧಾತ್ಮಕ ಪರೀಕ್ಷೆಗಳನ್ನು ತೆಗೆದುಕೊಳ್ಳಲು ಇಚ್ಛಿಸುವ ಉಡುಪಿ ಜಿಲ್ಲೆಯ ಅಭ್ಯರ್ಥಿಗಳಿಗೆ ಉಚಿತ ತರಬೇತಿಯನ್ನು ಶೀಘ್ರದಲ್ಲಿ ಪ್ರಾರಂಭಿಸಲು ಉದ್ದೇಶಿಸಲಾಗಿದೆ.
ಕೊನೆಯ ವರ್ಷದ ಪದವಿಯಲ್ಲಿ (ಯಾವುದೇ ಪದವಿ) ವ್ಯಾಸಂಗ ಮಾಡು ತ್ತಿರುವ ಅಥವಾ ಪದವೀಧರರಾಗಿದ್ದು, ಉದ್ಯೋಗ ದಲ್ಲಿರುವ / ನಿರುದ್ಯೋಗಿ ವಿದ್ಯಾರ್ಥಿಗಳು ತರಬೇತಿಗೆ ಅರ್ಹರಾಗಿರುತ್ತಾರೆ.
ಉಡುಪಿ ನಗರದ ಸಾರ್ವಜನಿಕ ಗ್ರಂಥಾಲಯನ್ನು ತರಬೇತಿ ಕೇಂದ್ರವಾಗಿಸಿ ಕೊಂಡು, ನಿಗದಿಯಾಗಿರುವ ಪಠ್ಯಾನುಸಾರ ತರಗತಿಗಳು, ಗ್ರಂಥಾಲಯ, ಪುಸ್ತಕಗಳು, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಗತ್ಯವಿರುವ ಪತ್ರಿಕೆಗಳು, ನಿಯತಕಾಲಿಕ ಗಳು, ಅಂರ್ತಜಾಲದ ವ್ಯಾಪಕ ಬಳಕೆ, ಗುಂಪು ಚರ್ಚೆಗಳು ಇತ್ಯಾದಿ ಮೂಲ ಸೌಕರ್ಯ ಮತ್ತು ಅವಕಾಶಗಳನ್ನು ಅಭ್ಯರ್ಥಿಗಳಿಗೆ ಕಲ್ಪಿಸಿಕೊಡಲಾಗುವುದು.
ಈ ಸೌಲಭ್ಯಗಳನ್ನು ಉಪಯೋಗಿಸಿಕೊಂಡು ಯುಪಿಎಸ್‌ಸಿ/ ಕೆಪಿಎಸ್‌ಸಿ ಸೇರಿದಂತೆ ಯಾವುದೇ ಸ್ಪರ್ಧಾತ್ಮಕ ವಿಷಯಗಳಲ್ಲಿ ಪರಿಣಿತಿ ಪಡೆಯ ಬಹುದಾಗಿದೆ. ಆಸಕ್ತ ವಿದ್ಯಾರ್ಥಿಗಳಿಗೆ ಆನ್‌ಲೈನ್‌ನಲ್ಲಿ ಅರ್ಜಿಗಳನ್ನು ಸಲ್ಲಿಸಲು udupi.nic.in ವೆಬ್‌ಸೈಟ್‌ನಲ್ಲಿ ಅವಕಾಶ ಕಲ್ಪಿಸಲಾಗಿದ್ದು, ಅಕ್ಟೋಬರ್ 21ರೊಳಗೆ ಅರ್ಜಿಗಳನ್ನು ಸಲ್ಲಿಸಬಹುದು ಎಂದು ಜಿಲ್ಲಾಧಿಕಾರಿ ಕೂರ್ಮಾ ರಾವ್ ಎಂ. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.







