ಕೋವಿಡ್‌ನಿಂದ 1.76 ಲಕ್ಷ ಖಾಸಗಿ ಶಿಕ್ಷಕರು ನಿರುದ್ಯೋಗಿಗಳು: ರಾಜ್ಯ ಖಾಸಗಿ ಶಿಕ್ಷಕರ ಬಳಗದ ರಾಜ್ಯಾಧ್ಯಕ್ಷ ನಾಗೇಶ್

ಉಡುಪಿ, ಅ.18: ಸರಕಾರ ಇತ್ತೀಚಿನ ದಿನಗಳಲ್ಲಿ ವೃತ್ತಿಪರ ಶಿಕ್ಷಕರನ್ನು ಕಡೆಗಣಿಸುತ್ತಿದೆ. ರಾಜ್ಯದಲ್ಲಿ ಒಟ್ಟು 3.48 ಲಕ್ಷ ಖಾಸಗಿ ಶಿಕ್ಷಕರಿದ್ದು, ಅದರಲ್ಲಿ 1.76 ಲಕ್ಷಕ್ಕೂ ಅಧಿಕ ಮಂದಿ ಕೋವಿಡ್‌ನಿಂದಾಗಿ ಉದ್ಯೋಗ ಕಳೆದುಕೊಂಡಿ ದ್ದಾರೆ. ಅಲ್ಲದೆ ಹಲವು ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಕರ್ನಾಟಕ ರಾಜ್ಯ ಖಾಸಗಿ ಶಿಕ್ಷಕರ ಬಳಗದ ರಾಜ್ಯಾಧ್ಯಕ್ಷ ನಾಗೇಶ್ ಸಿ.ಎನ್. ತಿಳಿಸಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರಕಾರ ನೀಡಿದ ಪ್ಯಾಕೇಜ್ ಶಿಕ್ಷಕರಿಗೆ ಸಂಪೂರ್ಣವಾಗಿ ಸಿಕ್ಕಿಲ್ಲ. 10 ಜನ ಮಾಡುತ್ತಿದ್ದ ಕೆಲಸವನ್ನು ಈಗ ಒಬ್ಬರೇ ಶಿಕ್ಷಕರು ಮಾಡುತ್ತಿದ್ದಾರೆ. ಸಂಬಳದಲ್ಲಿ ಶೇ.50ರಷ್ಟು ಕಡಿತ ಮಾಡಲಾ ಗಿದೆ. ಉದ್ಯೋಗ ಕಳೆದುಕೊಂಡ ಶಿಕ್ಷಕರು ಇದೀಗ ತರಕಾರಿ ಮಾರಾಟ, ಬಟ್ಟೆ ವ್ಯಾಪಾರ ಸೇರಿದಂತೆ ಬೇರೆ ಬೇರೆ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂದರು.
ಸರಕಾರದ ಕಳೆದ 10 ವರ್ಷ ವರ್ಷಗಳಿಂದ ಅಥಿತಿ ಶಿಕ್ಷಕರನ್ನು ಸೇವೆಗೆ ಬಳಸಿಕೊಳ್ಳುತ್ತಿದ್ದಾರೆಯೇ ಹೊರತು ಅದಕ್ಕೆ ತಕ್ಕ ಸ್ಥಾನವನ್ನು ನೀಡುತ್ತಿಲ್ಲ. ಖಾಸಗಿ ಶಾಲೆಯ ಶಿಕ್ಷಕರಿಗೆ ಸರಕಾರ ಅಥವಾ ಆಡಳಿತ ಮಂಡಳಿಗಳು ಶಿಕ್ಷಕರಿಗೆ ಸೇವಾ ಭದ್ರತೆ, ಮೂಲ ವೇತನ ನೀಡುವ ಬಗ್ಗೆ ಯಾವುದೇ ರೀತಿಯಲ್ಲಿ ಒಲವು ತೋರಿಸುತ್ತಿಲ್ಲ ಎಂದು ಅವರು ಆರೋಪಿಸಿದರು.
ಶಿಕ್ಷಕರ ಸೇವಾವಧಿಯನ್ನು ಪರಿಗಣಿಸಿ ಮೂಲವೇತನ ಮತ್ತು ಸೇವಾ ಭದ್ರತೆಯನ್ನು ಒದಗಿಸಬೇಕು. ಸೇವೆಗೆ ಸೇರ್ಪಡೆಗೊಂಡ ಶಿಕ್ಷಕರಿಗೆ ನೇಮಕಾತಿ ಆದೇಶ ಪತ್ರ ನೀಡಬೇಕು. ಸೇವಾ ಭಡ್ತಿ, ಮುಖ್ಯೋಪಾಧ್ಯಾಯರ ಬಡ್ತಿಯನ್ನು ಅರ್ಹ ಶಿಕ್ಷಕರಿಗೆ ನೀಡಬೇಕು, ಸರಕಾರಿ ಸೇವೆಯಿಂದ ನಿವೃತ್ತಿ ಹೊಂದಿ, ಪಿಂಚ ಪಡೆಯುವವರು ಅನುದಾನಿತ ರಹಿತ ಶಾಲೆಗಳಲ್ಲಿ ಪಾಠ ಮಾಡುವುದನ್ನು ತಪ್ಪಿಸಬೇಕು ಎಂದು ಅವರು ಒತ್ತಾಯಿಸಿದು.
ಸುದ್ದಿಗೋಷ್ಠಿಯಲ್ಲಿ ಖಾಸಗಿ ಶಾಲೆ ಶಿಕ್ಷಕರ ಬಳಗದ ಉಡುಪಿ ಜಿಲ್ಲಾಧ್ಯಕ್ಷ ವಿದ್ಯಾಧರ್ ಪುರಾಣಿಕ್, ಪದಾಧಿಕಾರಿಗಳಾದ ಚಿತ್ರಕಲಾ, ಶೋಭಾ ಉಪಸ್ಥಿತರಿದ್ದರು.
ಡಿಡಿಪಿಐ ವಿರುದ್ಧ ಹೋರಾಟ
ಖಾಸಗಿ ಶಾಲೆಯಲ್ಲಿ ಮೂಲ ವೇತನ ನೀಡದೆ ಶಿಕ್ಷಕರನ್ನು ದುಡಿಸಿಕೊಳ್ಳು ತ್ತಿರುವ ಬಗ್ಗೆ ಡಿಡಿಪಿಐಗೆ ದೂರು ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ಮುಂದಿನ ದಿನದಲ್ಲಿ ಸಮಸ್ಯೆ ಪರಿಹರಿಸದಿದ್ದರೆ ರಾಜ್ಯದ ವಿವಿಧ ಜಿಲ್ಲೆಗಳ ಡಿಡಿಪಿಐ ವಿರುದ್ಧ ಕಾನೂನು ಹೋರಾಟ ಮಾಡಲಾಗುವುದು ಎಂದು ಎಂದು ಸಂಘದ ರಾಜ್ಯಾಧ್ಯಕ್ಷ ನಾಗೇಶ್ ಸಿ.ಎನ್. ಎಚ್ಚರಿಕೆ ನೀಡಿದ್ದಾರೆ.
ಕಳೆದ 5 ವರ್ಷದಲ್ಲಿ ಐದು ಬಾರಿ ಟಿ.ಇ.ಟಿ. ಪರೀಕ್ಷೆ ನಡೆಸಿದರೂ ಒಂದೇ ಒಂದು ಬಾರಿ ಕೂಡ ಖಾಸಗಿ ಶಿಕ್ಷಕರಿಗೆ ಸಿಇಟಿ ಪರೀಕ್ಷೆಗೆ ಅವಕಾಶ ನೀಡಿಲ್ಲ. ಇದರಿಂದ ಬಿಎಡ್ ಪದವಿ ಮುಗಿಸಿದ ಶಿಕ್ಷಕರು ಬಹಳಷ್ಟು ನಿರಾಸೆಗೊಂಡಿ್ದಾರೆ ಎಂದು ಅವರು ಆರೋಪಿಸಿದರು.







