ಸಿಖ್ಖರ ಮೇಲೆ ದಾಳಿ ನಡೆಸಿ ಆಸ್ಟ್ರೇಲಿಯಾದಿಂದ ಗಡಿಪಾರಾದ ವ್ಯಕ್ತಿಗೆ ಹರ್ಯಾಣದಲ್ಲಿ ಅದ್ದೂರಿ ಸ್ವಾಗತ

ಚಂಡೀಗಢ: ಸಿಡ್ನಿಯಲ್ಲಿ ಸಿಖರ ಮೇಲಿನ ದಾಳಿ ಪ್ರಕರಣದಲ್ಲಿ ಶಾಮೀಲಾತಿ ಆರೋಪ ಹೊತ್ತಿದ್ದ ಹಾಗೂ ಆಸ್ಟ್ರೇಲಿಯಾದಲ್ಲಿ ಆರು ತಿಂಗಳು ಸೆರೆವಾಸ ಅನುಭವಿಸಿದ ನಂತರ ಅಲ್ಲಿಂದ ಗಡೀಪಾರುಗೊಂಡಿರುವ ಹರ್ಯಾಣಾದ 24 ವರ್ಷದ ವಿಶಾಲ್ ಜೂದ್ ಇತ್ತೀಚೆಗೆ ತವರು ರಾಜ್ಯಕ್ಕೆ ಮರಳಿದಾಗ ಆತನಿಗೆ ನೀಡಲಾದ ಅದ್ದೂರಿಯ ಸ್ವಾಗತ ಹಲವರ ಹುಬ್ಬೇರುವಂತೆ ಮಾಡಿದೆ.
ವಿಶಾಲ್‍ನನ್ನು ಎಪ್ರಿಲ್‍ನಲ್ಲಿ ಬಂಧಿಸಲಾಗಿತ್ತು. ಆದರೆ ದಾಳಿ ಪ್ರಕರಣಗಳಲ್ಲಿ ಆತನ ಶಾಮೀಲಾತಿ ಇದ್ದರೂ ತಾನು ಭಾರತದ ತ್ರಿವರ್ಣದ ಗೌರವವನ್ನು ಎತ್ತಿ ಹಿಡಿಯುತ್ತಿರುವುದಾಗಿ ಆತ ಹೇಳಿಕೊಂಡಿದ್ದ.
ಜನಾಂಗೀಯ ದ್ವೇಷದ ಪ್ರಕರಣ ಸಹಿತ ಆತನ ವಿರುದ್ಧದ ಎಂಟು ಆರೋಪಗಳನ್ನು ನಂತರ ನ್ಯಾಯಾಲಯ ಕೈಬಿಟ್ಟಿದೆ ಎಂದು ಅಲ್ಲಿನ ಮಾಧ್ಯಮವೊಂದು ವರದಿ ಮಾಡಿದೆ.
Vishal Jood gets a hero's welcome in his hometown. Power of Haryanvis. pic.twitter.com/K5YwkjxbE3
— Rakesh Thiyyan (@ByRakeshSimha) October 17, 2021
Attempts to undermine Australia’s social cohesion will not be tolerated. https://t.co/uQKM3bMGeX
— Alex Hawke MP (@AlexHawkeMP) October 16, 2021
Next Story